Ad imageAd image

ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ 

Bharath Vaibhav
ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ 
WhatsApp Group Join Now
Telegram Group Join Now

ವನವದೆಹಲಿ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಜೊತೆಗೆ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅತ್ಯಂತ ಹಗುರವಾದ ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ಸ್ ಫಾರ್ ಹೈ ಎನರ್ಜಿ ಡಿಫೀಟ್ (ಎಬಿಎಚ್‌ಇಡಿ) ಬುಲೆಟ್ ಪ್ರೂಫ್ ಜಾಕೆಟ್‌ ಅನ್ನು ಅಭಿವೃದ್ಧಿಪಡಿಸಿದೆ. ಇದೀಗ ಈ ಜಾಕೆಟ್‌ನ ತಂತ್ರಜ್ಞಾನವನ್ನು ಐಐಟಿ ಮೂರು ಕಂಪನಿಗಳಿಗೆ ವರ್ಗಾಯಿಸಿದೆ.

ವರದಿಗಳ ಪ್ರಕಾರ ಈ ಜಾಕೆಟ್‌ 11-14 ಕೆಜಿಯ ಸಾಮಾನ್ಯ ಅಥವಾ ಹಳೆಯ ಬುಲೆಟ್‌ ಪ್ರೂಫ್‌ ಜಾಕೆಟ್‌ಗಿಂದ 30% ಕಡಿಮೆ ತೂಕವನ್ನು ಹೊಂದಿದ್ದು, 9 ಕೆಜಿ ತೂಗುತ್ತದೆ. ಈ ಜಾಕೆಟ್‌ನ ತಂತ್ರಜ್ಞಾನವನ್ನು ಮಿಧಾನಿ (ರೋಹ್ಟಕ್), ಎಸ್‌ಎಂಪಿಪಿ ಪ್ರೈವೇಟ್ ಲಿಮಿಟೆಡ್ (ದೆಹಲಿ), ಮತ್ತು ಎಆರ್‌ ಪಾಲಿಮರ್ಸ್ (ಕಾನ್ಪುರ್)ಗೆ ವರ್ಗಾಯಿಸಲಾಗಿದೆ.

ಬಿಐಎಸ್‌ ಲೆವೆಲ್ V ಮತ್ತು VI ಮಾನದಂಡಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಬುಲೆಟ್‌ ಪ್ರೂಫ್‌ ಜಾಕೆಟ್ ಸೈನಿಕರ ಚಲನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಸಂದರ್ಭದಲ್ಲಿ ಸುಧಾರಿತ ಬ್ಯಾಲಿಸ್ಟಿಕ್ ರಕ್ಷಣೆಯನ್ನು ನೀಡುತ್ತದೆ.

ಈ ಜಾಕೆಟ್‌ ಅನ್ನು ಸುಧಾರಿತ ಸಂಯೋಜಿತ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಗುರವಾದ ವಿನ್ಯಾಸ ಇದ್ದರೂ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ.

ಇದರಲ್ಲಿ ಸೆರಾಮಿಕ್ ಪದರವನ್ನು ಬಳಸಲಾಗುತ್ತಿದ್ದು, ಅದು ದಾಳಿಯ ವೇಳೆ ಗುಂಡುಗಳನ್ನು ಒಡೆಯುತ್ತದೆ. ಅಲ್ಟ್ರಾ-ಹೈ ಆಣ್ವಿಕ ತೂಕದ ಪಾಲಿಥಿಲೀನ್ ಪದರವು ಬುಲೆಟ್ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ಹೊರಹಾಕುತ್ತದೆ. ಈ ಮೂಲಕ ನುಗ್ಗುವಿಕೆಯನ್ನು ತಡೆಯುತ್ತದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!