ಕಲಬುರಗಿ : ತನ್ನ ಸಹೋದರನ ಸಾವಿನ ಸುದ್ದಿ ಕೇಳಿ ಆಘಾತಗೊಂಡ ತಮ್ಮ ಮರು ದಿನವೇ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಅಣ್ಣ ಬಸವಂತರಾಯನ ನಿಧನದ ಸುದ್ದಿ ತಿಳಿದು ತಮ್ಮ ಶಿವರಾಯ ಅತೀವ ದುಃಖಿತರಾಗಿದ್ದರು. ಸಹೋದರನ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗಿದ್ದ ಶಿವರಾಯ ಅವರು ಆಘಾತ ತಾಳಲಾರದೆ ಮೃತಪಟ್ಟಿದ್ದಾರೆ.
ಜನವರಿ 26ರಂದು ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಬಸವಂತರಾಯ ಸಣ್ಣಕ್ ಅವರು ಕೊನೆಯುಸಿರೆಳೆದಿದ್ದರು. ಇದ್ರಿಂದ ಮಾನಸಿಕ ಆಘಾತಕ್ಕೊಳಗಾದ ತಮ್ಮ, 79 ವರ್ಷದ ಶಿವರಾಯ ಸಣ್ಣಕ್ ಅವರು ಮನೆಗೆ ಹಿಂದಿರುಗಿದ ಬಳಿಕ ಹಾಸಿಗೆ ಹಿಡಿದ್ದರು.
ಅಣ್ಣನ ಅಂತ್ಯಕ್ರಿಯೆ ನಡೆದ ದಿನ ರಾತ್ರಿ ತಮ್ಮನೂ ಕೊನೆಯುಸಿರೆಳೆದಿದ್ದಾರೆ. ಹೀಗೆ ಸಾವಿನಲ್ಲೂ ಒಂದಾದ ಸಹೋದರರನ್ನು ನೆನೆದು ಕುಟುಂಬಸ್ಥರು ದುಃಖಿತರಾಗಿದ್ದಾರೆ.




