ನಿಡಗುಂದಿ : ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಜೆಸಿಪಿಯಿಂದ ಅನದೃಕತ ಅಂಗಡಿ ತೆರವು ಕಾರ್ಯಾಚರಣೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ NH-50ರ ಪಕ್ಕದಲ್ಲಿರುವ ಮುದ್ದೇಬಿಹಾಳಕ್ಕೆ ಹೋಗುವ ದಾರಿಯಲ್ಲಿ ಅನದಿಕೃತ ಇರುವ ತಗಡಿನ ಶೆಡ್ಡು ಅಂಗಡಿಗಳ ಒತ್ತೂವರಿ ಕಾರ್ಯಾಚರಣೆಯನ್ನು ಬುಧವಾರ ಬೆಳಗ್ಗೆ 7 ಗಂಟೆಯಿಂದ ಜೆಸಿಪಿ ಮತ್ತು ಟ್ಯಾಕ್ಟರ್ಂದ ಸ್ಥಳಿಯ ಆಡಳಿತವತಿಯಿಂದ ಪೋಲಿಸ್ ಸಿಬ್ಬಂಧಿಯ ಭದ್ರತೆಯೊಂದಿಗೆ ತೆರವು ನಡೆಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಹಸಿಲ್ದಾರ ಎ. ಡಿ. ಅಮರಾವಡಗಿ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ, ವೀರೇಶ್ ಹಟ್ಟಿಯವರ ಸಮ್ಮುಖದಲ್ಲಿ ತೆರವು ಕಾರ್ಯಚರಣೆ ನಡೆಯಿತು. ಈ ಕಾರ್ಯಚರಣೆಗೆ ಸೂಕ್ತವಾದ ನಿಡಗುಂದಿ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಪೊಲೀಸರ ಬಂದೋಬಸ್ತ್ ದೊಂದಿಗೆ ಜರುಗಿತು. ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನೆಡಸಿಸದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಮಾತನಾಡಿದರು.
ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ಹಾಗೂ ಪೋಲಿ ಸಿಬ್ಬಂದಿಯಾದ ಪಿಎಸ್ಐ ಮತ್ತು ಸಿಪಿಐ ಇಂಥ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಪಟ್ಟಣ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಜನಸಾಮಾನ್ಯರ ಅಭಿಪ್ರಾಯ.