ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ.
ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿದ್ದರು.
ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್.
ಕೇಂದ್ರ ಸರ್ಕಾರವು ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ ವಿತ್ತೀಯ ಶಿಸ್ತಿನ ಮೇಲೂ ಸರ್ಕಾರ ನಿಗಾ ಇರಿಸಲಿದೆ ಎನ್ನಲಾಗಿದೆ.




