Ad imageAd image

ಮತ ಕೇಳಲು ಕೇಂದ್ರ ಸಚಿವ ಜೋಶಿಗೆ ನೈತಿಕತೆ ಇಲ್ಲ

Bharath Vaibhav
ಮತ ಕೇಳಲು ಕೇಂದ್ರ ಸಚಿವ ಜೋಶಿಗೆ ನೈತಿಕತೆ ಇಲ್ಲ
WhatsApp Group Join Now
Telegram Group Join Now

ಹುಬ್ಬಳ್ಳಿ: –ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸುಳ್ಳು ಅಭಿವೃದ್ಧಿ ಹೆಸರು ಹೇಳಿ, ಮತ ಕೇಳುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಯಾವುದೇ ನೈತಿಕತೆ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ರಾಜು ನಾಯಕವಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಳೆದ ೨೦ ವರ್ಷಗಳಿಂದ ಕೇಂದ್ರ ಸಚಿವ ಜೋಶಿ ತಮ್ಮ ಖಜಾನೆ ತುಂಬಿಸಿಕೊಂಡಿದ್ದಾರೆ ಹೊರತು ಅಭಿವೃದ್ಧಿ ಕಾರ್ಯವಲ್ಲ, ಕ್ಷೇತ್ರದಲ್ಲಿ ಸಾವಿರಾರು ಜನರು ವಸತಿ ರಹಿತರಿದ್ದು, ಅವರಿಗೆ ವಸತಿ ಕಲ್ಪಿಸುವ ಬದಲಾಗಿ ಒಳಾಂಗಣ ಹೊರಾಂಗಣ ಕ್ರೀಡಾಂಗಣ, ಐಐಟಿ, ಇಂತವು ಗಳನ್ನು ಮಾಡಿಕೊಂಡು ಬಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಕಿಂಚಿತ್ತೂ ತಲೆ ಕೆಡಿಸಿ ಕೊಂಡಿಲ್ಲ

ಆದ್ದರಿಂದ ಸದಾ ಜನಪರ ಸೇವೆಗಾಗಿ ನಿಂತಿರುವ ರಾಜು ನಾಯಕವಾಡಿ ಆದ ನನಗೆ ಕ್ಷೇತ್ರದ ಅಭಿವೃದ್ಧಿಗೆ ನನಗೆ ಈ ಬಾರಿ ಅವಕಾಶ ನೀಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಆನಂದ ದಲಬಂಜನ, ನಾಗೇಂದ್ರ ಮಾಲಗತ್ತಿ, ಗೋಪಾಲ ಧಾರವಾಡಕರ್, ರಾಜು ಮಾಮರಡ್ಡಿ ಇದ್ದರು.

ವರದಿ :- ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!