Ad imageAd image

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜವಳಗೇರಾ ಗ್ರಾಮಕ್ಕೆ ಭೇಟಿ

Bharath Vaibhav
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜವಳಗೇರಾ ಗ್ರಾಮಕ್ಕೆ ಭೇಟಿ
WhatsApp Group Join Now
Telegram Group Join Now

—————–ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ, ಸಾಮಾನ್ಯ ಸೌಲಭ್ಯ ಕೇಂದ್ರ ಲೋಕಾರ್ಪಣೆ

ರಾಯಚೂರು : ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಲೋಕಾರ್ಪಣೆ ಸಮಾರಂಭ ಅ.16ರಂದು ನಡೆಯಿತು.
ಪೂರ್ವನಿಗದಿಯಂತೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11.35ರ ವೇಳೆಗೆ ಸಿಂಧನೂರ ಮಾರ್ಗವಾಗಿ ಜವಳಗೇರಾ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ದೇಶಿ ಶೈಲಿಯ ಮಹಿಳಾ ಡೊಳ್ಳಿನ ತಂಡದವರಿಂದ ಹಾಗೂ ಪುಷ್ಪಾರ್ಪಣೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮೊದಲಿಗೆ ಸಚಿವರು, ಅಂದಾಜು 2.54 ಕೋಟಿ ರೂ ವೆಚ್ಚದಲ್ಲಿ, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ನಬಾರ್ಡ ಸಂಯುಕ್ತವಾಗಿ ರೂಪಿಸಿರುವ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವಾದ ಕಲ್ಯಾಣ ಸಂಪದ ಕೇಂದ್ರವನ್ನು ರಿಬ್ಬನ್ ಕತ್ತರಿಸಿ ಲೋಕಾರ್ಪಣೆ ಮಾಡಿದರು.
ಇದೆ ವೇಳೆ ಸಚಿವರು, ಕಲ್ಯಾಣ ಸಂಪದ ಕಟ್ಟಡದಲ್ಲಿನ ಕಂಪನ ಜರಡಿ ಯಂತ್ರ, ಜಿಲ್ಲಾ ಮಿಶ್ರಣ ಸಂಗ್ರಹಗಾರ, ಜಿಲ್ಲಾ ಮಿಶ್ರಣ ಯಂತ್ರ, ಶುದ್ಧೀಕರಣ‌ ಮತ್ತು ಗ್ರೈಂಡಿಂಗ್ ಯಂತ್ರ, ಬಣ್ಣ ಆಧಾರಿತ ಬೇರ್ಪಡಿಸುವ ಯಂತ್ರ, ಬೇಳೆ ಪ್ಯಾಂಕಿಂಗ್ ಯಂತ್ರ, ತಯಾರಾದ ವಸ್ತುಗಳ ಸಂಗ್ರಹಗಾರದ ವೀಕ್ಷಣೆ ನಡೆಸಿದರು. ಬಳಿಕ ವೇದಿಕೆಯ ಕಾರ್ಯಕ್ರಮ ನಡೆಯಿತು.
ಈ ವೇಳೆ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ ನಾಗರಾಜ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ನಬಾರ್ಡ ಅಧ್ಯಕ್ಷರಾದ ಶಾಜಿ ಕೆ.ವಿ., ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮುಖಂಡರಾದ ವೆಂಕಟರಾವ್ ನಾಡಗೌಡ, ಕೆ.ವಿರುಪಾಕ್ಷಪ್ಪ, ಜವಳಗೇರಾ ಗ್ರಾಪಂ ಅಧ್ಯಕ್ಷರಾದ ನಾಗಲಿಂಗ ಯಮನೂರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!