Ad imageAd image

ಮಲಪ್ರಭಾ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ನಡೆದ ಅಹೋರಾತ್ರಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಕೊಟ್ಟ ರೈತ ಸಂಘಗಳ ಒಕ್ಕೂಟ

Bharath Vaibhav
ಮಲಪ್ರಭಾ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ನಡೆದ ಅಹೋರಾತ್ರಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಕೊಟ್ಟ ರೈತ ಸಂಘಗಳ ಒಕ್ಕೂಟ
WhatsApp Group Join Now
Telegram Group Join Now

ಕಿತ್ತೂರು:-  ಕಳೆದ 7 ದಿವಸಗಳಿಂದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಭ್ರಷ್ಟಾಚಾರ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ದರಣಿಗೆ ತಾತ್ಕಾಲಿಕ ವಿರಾಮ ತೆಗೆದುಕೊಂಡು ಕೈ ಬಿಡಲಾಗಿದೆ.

ನಿನ್ನೆ ಆಡಳಿತ ಮಂಡಳಿಯ ಸರ್ವ ಸದಸ್ಯರ ನೇತೃತ್ವದ ತಂಡ ರೈತ ಸಂಘಗಳನ್ನು ಭೇಟಿಯಾಗಿ ಸಿ.ಬಿ.ಐ ತನಿಖೆಗೆ ವಹಿಸುವುದಕ್ಕೆ ಠರಾವು ಪಾಸ್ ಮಾಡಿದ ಪತ್ರವನ್ನು ರೈತಸಂಘಗಳಿಗೆ ಹಸ್ತಾಂತರ ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಈ ಹೋರಾಟವನ್ನು ಕೈ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ರೈತ ಸಂಘಗಳ ಒಕ್ಕೂಟ ಸದಸ್ಯರು ಆದ ಬಸನಗೌಡ ಪಾಟೀಲ್, ಬೀರಪ್ಪ ದೇಶುರು, ಬಸವರಾಜು ಮೊಕಾಶಿ, ಸಂಜು ತೇಲಗರ ಮಾತನಾಡಿ ಈ ಹೋರಾಟ ಕೈ ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಸತತ 7 ದಿವಸಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಹೋರಾಟ ನಿನ್ನೆಗೆ ಬ್ರೇಕ್ ಬಿದ್ದಿದ್ದೆ.

 ವರದಿ:- ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!