ಸಿಂಧನೂರು : ಸಂಸತ್ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ನಗರದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಎಪಿಎಂಸಿ ಗಣೇಶ್ ದೇವಸ್ಥಾನದಿಂದ ತಾಸಿಲ್ದಾರ್ ಕಛೇರಿ ವರೆಗೆ ಪ್ರತಿಭಟನೆ ನಡೆಸಿ ರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಗೊಳಿಸಬೇಕೆಂದು ಆಗ್ರಹಿಸಿ ದೇಶದ ಸಂವಿಧಾನವನ್ನು ಸದಾ ಅವಮಾನಿಸುತ್ತಾ ದೀನ ದಲಿತರ, ಅಲ್ಪಸಂಖ್ಯಾತರನ್ನು, ರೈತರಿಗೆ ಕತ್ತುಹಿಸುಕುವ ಕಾಯ್ದೆಗಳು ತರುವ ಬಿಜೆಪಿಯನ್ನು ಆಡಳಿತದಿಂದ ಕಿತ್ತೊಗಿಯಬೇಕೆಂದು ಪ್ರತಿಭಟನೆಯುದ್ದಕ್ಕೂ ವಿವಿಧ ಸಂಘಟನೆಗಳ ಮುಖಂಡರು ಕಾಲೇಜ್ ವಿದ್ಯಾರ್ಥಿಗಳು ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗುತ್ತಾ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಸನ್ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡರಾದ – ಆರ್. ಬೋನಾಂಚರ್, ಡಿ ಹೆಚ್. ಪೂಜಾರ್, ಅಲ್ಲಮಪ್ರಭು ಪೂಜಾರ್, ಅಶೋಕ್ ನಂಜಲದಿನ್ನಿ, ಶೇಖರಪ್ಪ ವಕೀಲರು, ನಿರುಪಾದಿ ವಕೀಲರು, ಮೌನೇಶ್ ಜಾಲವಾಡಗಿ, ಮರಿಸ್ವಾಮಿ ಪೂಜಾರಿ, ರಾಮಣ್ಣ ಗೋನ್ವಾರ್, ಮಂಜುನಾಥ್ ಗಾಂಧಿನಗರ, ನಾಗರಾಜ್ ಪೂಜಾರಿ, ಮರಿಯಪ್ಪ ಜಾಲಿಹಾಳ, ಮರಿಯಪ್ಪ ಬಿಎಸ್ಪಿ, ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ