ಹುಬ್ಬಳ್ಳಿ: ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ೧೫೦ ನೇ ಜಯಂತಿ ಅಂಗವಾಗಿ ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಏಕತಾ ನಡಿಗೆ ಹಮ್ಮಿಕೊಳ್ಳ ಲಾಯಿತು.
ನಗರದ ಮೂರುಸಾವಿರಮಠದ ಆವರಣದಿಂದ ಆರಂಭಗೊAಡ ನಡಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದೇಶದ ಮೊದಲ ಗೃಹಸಚಿವ, ಉಕ್ಕಿನ ಮನುಷ್ಯ ಪಟೇಲ್‌ರು ಭಾರತದ ಏಕತೆಯ ಸೂತ್ರದಾರ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಜ್ಯೋತಿ ಪಾಟೀಲ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶ್ ಕೌಜಗೇರಿ, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಉಮಾ ಮುಕುಂದ, ಚಂದ್ರಿಕಾ ಮೇಸ್ತ್ರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೀಮಾ ಲದ್ವಾ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ನಾರಾಯಣ ಜರತಾರಘರ, ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಮಂಜುನಾಥ ಚಿಂತಗಿAಜಲ್, ಪ್ರಭು ನವಲಗುಂದಮಠ, ಕೃಷ್ಣಾ ಗಂಡಗಾಳೇಕರ, ಅಮೃತ ಕಲ್ಪವೃಕ್ಷ, ವೆಂಕಟೇಶ ಹಬೀಬ, ಶಿವಾನಂದ ಅಂಬಿಗೇರ, ಮಿಥುನ ಚವ್ಹಾಣ, ಅಕ್ಕಮ್ಮ ಹೆಗಡೆ, ಪ್ರವೀಣ್ ಪವಾರ್, ಸುಮಾ ಶಿವನಗೌಡ್ರ, ಮಂಜುನಾಥ ಕಾಟಕರ, ನಾಗರತ್ನಾ ಬಳ್ಳಾರಿ, ಸರೋಜಾ ಛಬ್ಬಿ, ಪ್ರವೀಣ ಕುಬಸದ ಸೇರಿದಂತೆ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಸುಧೀರ್ ಕುಲಕರ್ಣಿ




