ಐಗಳಿ : ಇಂದು ಮಧ್ಯಾಹ್ನದಲ್ಲಿ ಅಕಾಲಿಕವಾಗಿ ಗಾಳಿ, ಗುಡುಗು, ಮಿಂಚು, ಆಣೆಕಲ್ಲು, ಹಾಗೂ ರಬಸದಿಂದ ಕೂಡಿದ ದಾರಾಕಾರ ಮಳೆ ಬಿದ್ದಿರುವದರಿಂದ ದ್ರಾಕ್ಷಿ ಬೆಳೆಗಾರರ ಎದೆ ಡವ-ಡವವಾಗಿದೆ.
ಇಂದು ಮಧ್ಯಾಹ್ನ ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರ ಬೆಳೆ ಕೊಟ್ಯಾಂತರ ರೂಪಾಯಿ ಹಾನಿಯಾಗಿದೆ. ಹಸಿ ದ್ರಾಕ್ಷಿ ಸಫಲ ಕಟಾವಿಗೆ ಬಂದಿದ್ದು, ಕೆಲವು ರೈತರು ಒಣ ದ್ರಾಕ್ಷಿ ತಯಾರಿಸಲು ಪ್ರಾರಂಭಿಸಿದ್ದಾರೆ. ಶೆಡ್ದಲ್ಲಿ ಹಾಕಿದ ದ್ರಾಕ್ಷಿ ಮಳೆಗೆ ತೊದು ಕಪ್ಪು ಬಣ್ಣವಾಗಿ ಹಾನಿಯಾಗಿದೆ. ಶೆಡ್ ಮುಚ್ಚಲು ಎಷ್ಟೆ ಪ್ರಯತ್ನ ಮಾಡಿದರೂ ಕೂಡ ಬೀಸಿದ ಗಾಳಿಯಿಂದ ಮುಚ್ಚಲು ಸಾಧ್ಯವಾಗಲಿಲ್ಲ. ಒಣ ದ್ರಾಕ್ಷಿ ಸಂಸ್ಕರಣ ಮಾಡುವ ಸ್ಥಳದಲ್ಲಿ ಮಳೆ ನೀರು ಬಂದು ಅಲ್ಲಿ ಸಹ ಹಾನಿಯಾಗಿದೆ. ರೈತರಿಗೆ ಸೆಡ್ಡುಗಳ ಇಲ್ಲದೇ ಅವರು ಐಗಳಿ ಒಣ ದ್ರಾಕ್ಷಿ ಘಟಕದಲ್ಲಿ ಹಾಕಿಸಿದ್ದಾರೆ. ಅದರಂತೆ ಯಲಹಡಲಗಿ, ಬಡಚಿ, ಐಗಳಿ ಕ್ರಾಸ್, ಸಿಂಧೂರ ಘಟಕ, ಹಾಲಳ್ಳಿ ಕಕಮರಿಯ ಸಿಕಂದರ ಮುಜಾವರ ಘಟಕದಲ್ಲಿ ರೈತರ ದ್ರಾಕ್ಷಿ ಸೆಡ್ಡ್ದಲ್ಲಿ ಹಾಕಿದ್ದಾರೆ. ಎಲ್ಲವು ನಾಶಹೊಂದಿದೆ ಎಂದು ರೈತರು ತಿಳಿಸಿದ್ದಾರೆ.
ಕಡಿಮೆ ನೀರಾವರಿಯಲ್ಲಿ ಹೆಚ್ಚಿನ ಆದಾಯ ಆಗಲಿದೆ ಎಂದು ರೈತರು ಕನಸು ಇಟ್ಟುಕೊಂಡು ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಳ್ಳೆಯ ಬೆಳೆ ತಯಾರಿಸಿದ್ದರು. ದೈವ ಒಂದು ಬಗೆದರೆ ದೇವರು ಒಂದು ಬಗೆದಂತೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇನ್ನೂ ಅರ್ದದಟ್ಟು ದ್ರಾಕ್ಷಿ ಬೆಳೆ ಇದೆ ಗಾಳಿ, ಆಣೆಕಲ್ಲು ಬಿದ್ದು ಸಫಲು ವಿಫಲವಾಗಿದೆ ಎಲ್ಲಿ ಕಾಯಿಗಳು ಉದಿರಿವೆ ಆಣೆಕಲ್ಲಿಗೆ ಹಣ್ಣುಗಳು ತುತು ಬಿದ್ದು ನಾಶವಾಗಿದೆ. ಒಟ್ಟಾರೆ ರೈತರ ಗೋಳು ಯಾರಿಗೆ ಹೇಳುವದು ಕೂಡಲೇ ಸರಕಾರ ದ್ರಾಕ್ಷಿ ಬೆಳೆಗಾರರ ಹಾನಿ ಹಾಗೂ ಒಣ ದ್ರಾಕ್ಷಿ ತಯಾರಿಸುವ ಸಮಯದಲ್ಲಿ ಬಿದ್ದ ಮಳೆಯಿಂದ ಹಾನಿಯಾದ ಅವಧಿಯನ್ನು ಕೂಡಲೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ವರದಿ ಮಾಡಿ ಸರಕಾರಕ್ಕೆ ಮುಟ್ಟಿಸುವ ಕಾರ್ಯ ಆಗಲಿ ಬೇಗನೆ ಪರಿಹಾರ ನೀಡುವಂತೆ ಅನೇಕ ರೈತರು ಆಗ್ರಹಿಸಿದ್ದಾರೆ.
ಈ ಬಾರಿ ದ್ವಾಕ್ಷಿಗೆ ಬೆಲೆ ಇದೆ ಹಾಗೂ ಒಣದ್ರಾಕ್ಷಿ ಹೆಚ್ಚಿನ ಬೆಲೆ ಸಿಗಬಹುದು ಎಂದು ಆಸೆ ಇಟ್ಟ ರೈತರು ಇಂದು ಬಿದ್ದ ಮಳೆ, ಗಾಳಿ, ಆಣೆಕಲ್ಲು ಒಣದ್ರಾಕ್ಷಿ ತಯಾರಿಕೆ ಕೇಂದ್ರದಲ್ಲಿ ಕೊಟ್ಯಾಂತರ ರೂಪಾಯಿ ಹಾನಿಯಾಗಿದೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ದ್ರಾಕ್ಷಿ ಬೆಳೆಗಾರರ ಹಾನಿಯಾದ ಬೆಳೆ ಪರಿಹಾರ ನೋಡಲಿ. ಈಗಾಗಲೇ ಸಾಲ ಮಾಡಿ ದ್ರಾಕ್ಷಿ ಬೆಳೆ ಉತ್ತಮವಾಗಿ ಬೆಳೆಸಿದ್ದಾರೆ. ಒಳ್ಳೆಯ ಸಫಲ ಬಂದಿದೆ ಪ್ರಕೃತಿ ವಿಕೋಪಕ್ಕೆ ಎಲ್ಲವೂ ತುತ್ತಾಗಿದೆ. ಪರಿಹಾರ ಬೇಗನೆ ಸರಕಾರ ನೀಡಲಿ. –ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅಧ್ಯಕ್ಷರು ಒಣ ದ್ರಾಕ್ಷಿ ಸಂಸ್ಕರಣ ಘಟಕ ಐಗಳಿ
ವರದಿ: ಆಕಾಶ ಎಮ್




