ಸಿಂಧನೂರು : ಮೇ 25ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ದಲಿತ ಬಾಲಕ ಸೃಜನ್ ನಿಗೆ ಕ್ಷೌರ ಮಾಡಲು ಕ್ಷೌರದಂಗಡಿಯ ಕಾಳಿಂಗ ಮಲ್ಲದಗುಡ್ಡ ಊರಿನ ಕೆಲ ಸವರ್ಣಿಯರಾದ ಶರಣಪ್ಪ ಹರಗಿ. ನಿಂಗಪ್ಪ ಬೂತಳ್ಳಿ. ಹುಚ್ಚಪ್ಪ. ಕುರುಡಪ್ಪ. ಮುದಿಯಪ್ಪ ಹರಗಿ. ಬಸವರಾಜ ಹರಿಗೆ. ಬಾಲಕನನ್ನು ತಡೆದು ಅಡ್ಡಗಟ್ಟಿ ಜಾತಿ ನಿಂದೇನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದಾರೆ ಇದೇ ವೇಳೆ ಬಾಲಕನ ಅಜ್ಜಿ ಯಲ್ಲಮ್ಮ ಬಂದಿದ್ದಾಳೆ ಹೇ ಮುದುಕಿ ನಿನ್ನ ಮೊಮ್ಮಗನ ಕಳೆದುಕೊಂಡು ಹೋಗಿ ಸಿಂಧನೂರಿನಲ್ಲಿ ಕಟಿಂಗ್ ಮಾಡಿಸು ನೀವು ಕೀಳು ಜಾತಿಯವರು ಊರಿನ ಕ್ಷೌರ ದಂಗಡಿಗೆ ಬರಕೂಡದು ಎಂದು ಧಮ್ಕಿಹಾಕಿ ಗಲಾಟೆ ಮಾಡಿದ್ದಾರೆ ಆದರೆ ದಲಿತ ಯಲ್ಲಮ್ಮ ದೂರು ನೀಡಲು ಹಿಂದೇಟು ಹಾಕಿದ್ದಾಳೆ ಕಾರಣ ಏನೇ ಇರಬಹುದು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಡುತ್ತಿರುವ ಮೂಲಭೂತ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆ ಒಂದು ಅಸ್ಪೃಶ್ಯತೆ ತಡೆಯಲು ನಾನಾ ಕಾನೂನುಗಳಿದ್ದರೂ ಅಸ್ಪೃಶ್ಯತೆ ಪಿಡುಗು ಇನ್ನೂ ಈ ಅರಳಹಳ್ಳಿ ಗ್ರಾಮದಲ್ಲಿ ಜೀವಂತವಾಗಿದೆ ಕಾನೂನು ಬಗ್ಗೆ ಅರಿವಿಲ್ಲದೆ ಕಾನೂನು ಬಗ್ಗೆ ಭಯವಿಲ್ಲದೆ ದಲಿತರ ಮೇಲೆ ಹಲ್ಲೆ ಜಾತಿಭೇದ ತಾರತಮ್ಯ ಸವರ್ಣಿಯರು ಮಾಡುತ್ತಾ ಬಂದಿದ್ದಾರೆ.
ಇಂತಹ ಅನಿಷ್ಟ ಪದ್ದತಿ ಅಸ್ಪೃಶ್ಯತೆ ಆಚರಣೆಯನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಪೊಲೀಸ್ ಇಲಾಖೆ. ಎಚ್ಚೆತ್ತುಕೊಂಡು ಇಂತಹ ಘಟನೆ ಮರುಕಳಿಸಿದಂತೆ ಕ್ರಮವಹಿಸಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿರ್ಮೂಲನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಡಾ. ಬಿ ಆರ್. ಅಂಬೇಡ್ಕರ್ ಯುವಕ ಮಂಡಳಿ ಹರಳಹಳ್ಳಿ ಕಾರ್ಯಕರ್ತರಾದ ಹುಸೇನಪ್ಪ. ಬಸವರಾಜ್ ದೇವಪ್ಪ ರಮೇಶ್ ಮೌನೇಶ್ ಸಣ್ಣ ಯಮನೂರಪ್ಪ ಸಣ್ಣಬಾಳಪ್ಪ ಹುಸೇನಪ್ಪ ರಮೇಶ್ ಮಹೇಶ್ ಪರಶುರಾಮ್ ಹುಲ್ಲೇಶ ನಾಗರಾಜ್ ಇದ್ದರು.
ಬಸವರಾಜ ಬುಕ್ಕನಹಟ್ಟಿ, ಸಿಂಧನೂರು




