ಗೋಕಾಕ: ಸತತವಾಗಿ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದಿಂದ ಉಪ್ಪಾರಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮುಳಗಡೆಯಾಗಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಇತ್ತ ಸೇತುವೆ ಮುಳಗಡೆಯಾದರು ಸಹ ಗ್ರಾಮಸ್ಥರ ಪರಿಸ್ಥಿತಿ ತಿಳಿದುಕೊಳ್ಳಲು ಸ್ಥಳಿಯ ಪಿಡಿಓ,ಗ್ರಾಮಲೆಕ್ಕಾಧಿಕಾರಿ ಹಾಗೂ ಗೋಕಾಕ ತಹಸಿಲ್ದಾರ ಇವರು ಸ್ಥಳಕ್ಕೆ ಆಗಮಿಸದೆ ಇದ್ದಕ್ಕೆ ಸ್ಥಳಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರತಿ ಭಾರಿಯೂ ಮಳೆ ಬಂದರೆ ಸಾಕು ಸೇತುವೆ ಜಲಾವೃತಗೊಂಡು ಮುಳಗಡೆಯಾಗಿ ಆಗುವ ತೊಂದರೆ ಬಗ್ಗೆ ಹಲವಾರು ಬಾರಿ ಸೇತುವೆ ಮಟ್ಟವನ್ನು ಎರಿಸಲು ಗೋಕಾಕ ತಹಸಿಲ್ದಾರಗೆ ಹೇಳಿದರು ಸಹ ಇನ್ನೂ ವರೆಗೂ ಯಾವುದೆ ರೀತಿ ಸ್ಪಂದಿಸಿಲ್ಲ.
ವರದಿ: ಮನೋಹರ ಮೇಗೇರಿ




