ಸೇಡಂ: ತಾಲೂಕಿನ ಬೋಂದೇಪಲ್ಲಿ ಗ್ರಾಮದಲ್ಲಿ ದಿ. 23/02/2026ರಂದು ದಲಿತ ಸಮುದಾಯದ ಜನಾಂಗವು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ಸರಕಾರಿ ಸ್ಥಳದಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು ಆದರೆ ಊರಿನ ಮೇಲ್ಜಾತಿ ಜನಾಂಗದವರು ನಂದು ಸಾಹುಕಾರ್ ಎಂಬುವವರ ಬೆಂಬಲದೊಂದಿಗೆ ಕಾಮಗಾರಿಗೆ ವಿರೋಧವಾಗಿ ಫೆಬ್ರವರಿ 27ರಂದು ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದು ದಲಿತರಿಗೆ ಮಾಡುತ್ತಿರುವ ಅನ್ಯಾಯ ಎಂದು ಗ್ರಾಮದ ದಲಿತ ಸಮುದಾಯದವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮುಖ್ರಂ ಖಾನ್ ಅವರ ಮೊರೆ ಹೋಗಿದ್ದರು.
ಈ ಸಮಸ್ಯೆಯನ್ನು ಊರಿನಲ್ಲೇ ಬಗೆಹರಿಸಿಕೊಳ್ಳಬೇಕೆಂದು ಸಮಸ್ಯೆ ದೊಡ್ಡದಾಗಬಾರದು ಎಂಬ ಉದ್ದೇಶದಿಂದ ಶುಕ್ರವಾರ ಮಾರ್ಚ್ 6 ರಂದು ಶಾಂತಿಸಭೆಗೆ ಕರೆ ನೀಡಿದರು.

ಆದರೆ ಈ ಸಭೆಯಲ್ಲಿ ಸಮಸ್ಯೆ ಬಗೆಹರಿಯದೆ ಊರಿನ ಮೇಲ್ಜಾತಿ ಜನಾಂಗ ಪೊಲೀಸ್ ಅಧಿಕಾರಿಗಳ ಮತ್ತು ಮುಖಂಡರ ಎದುರೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧ ತಿಳಿಸಿದ್ದು ತುಂಬಾ ನೋವಿನ ವಿಷಯವಾಗಿದೆ.
ಕೇವಲ ಕೆಲ ಪುಂಡರಿಂದ ಇಂತಹ ಜಾತಿಬೇದದ ವಿಷಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದ್ದು ಸಭೆಯನ್ನು ಇನ್ನೂ ಎರಡು ದಿನಗಳ ಕಾಲ ಮುಂದೂಡಲಾಗಿದೆ.
ಆದರೆ ಊರಿನ ಮೇಲ್ಜಾತಿ ಜನರು ಕೆಲಸ ಅರ್ದ ಮುಗಿಯುವತನಕ ವಿರೋಧ ತಿಳಿಸದೆ ಕಾಮಗಾರಿ ಪೂರ್ಣಗೊಳುತ್ತಿರುವ ಸಮಯಕ್ಕೆ ಬಂದು ವಿರೋಧ ತೋರಿಸುತ್ತಿರುವುದು ಇಡೀ ದಲಿತ ಸಮುದಾಯಕ್ಕೆ ದೋರಣೆ ತೋರುತ್ತಿದ್ದಾರೆ.
ಈ ವಿಷಯವನ್ನು ಮುಧೋಳ ಠಾಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಂವಿಧಾನದ ಪಿತಾಮಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ವಿರೋಧ ತೋರಿಸುತ್ತಿರುವ ಕೆಲ ಪುಂಡರನ್ನು ಕೂಡಲೇ ಬಂಧಿಸಬೇಕೆಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ವಿಳಂಬ ಮಾಡಿದ್ದಲ್ಲಿ ಸೇಡಂ ತಾಲೂಕಿನ ದಲಿತ ಸಂಘಟನೆಗಳ ಜೊತೆಗೆ ಬೊಂದೆಪಲ್ಲಿ ಗ್ರಾಮದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮುಖ್ರಂ ಖಾನ್ ಅವರು ಮಾತನಾಡಿ ನಾನು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಅನೇಕ ಕಾಮಗಾರಿಗಳನ್ನು ಈ ಭಾಗಕ್ಕೆ ತಂದಿದ್ದೇನೆ ಈ ಗ್ರಾಮದಲ್ಲಿ ಶಾಲೆ ಸೇರಿದಂತೆ ಅನೇಕ ಸಮುದಾಯ ಭವನಗಳು ನಿರ್ಮಿಸಿದ್ದೇನೆ ನಿಮ್ಮ ಮೇಲೆ ಇರುವ ಪ್ರೀತಿಯಿಂದ ನಾನು ಮನವಿ ಮಾಡುತ್ತೇನೆ ದಯವಿಟ್ಟು ಒಳ್ಳೆ ಕಾರ್ಯಕ್ಕೆ ಯಾರು ಅಡ್ಡಿಪಡಿಸಬೇಡಿ ಇಲ್ಲವಾದಲ್ಲಿ ನಿಮ್ಮ ಗತಿ ನೀವೇ ಅನುಭವಿಸುವಿರಿ ಎಂದು ಹೇಳಿದರು.
ಈ ವೇಳೆ ಮುಧೋಳ ಪೊಲೀಸರು ಬಂದೋಬಸ್ತ್ ಮಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




