ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ದ ಅಧ್ಯಕ್ಷ ಸ್ಥಾನಕ್ಕೆ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರಾವಧಿ ಮುಗಿಯಲು ಇನ್ನೂ ಐದು ವರ್ಷಗಳು ಬಾಕಿ ಇರುವಗಲೇ ದಿಢೀರ್ ರಾಜೀನಾಮೆ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.ಮನೋಜ್ ಸೋನಿ ಅಧಿಕಾರಾವಧಿ 2029ಕ್ಕೆ ಕೊನೆಗಳ್ಳಬೇಕಿತ್ತು.
ಆದರೆ ಇದೀಗ ರಾಜೀನಾಮೆ ನೀಡಿದ್ದಾರೆ. ಮನೋಜ್ ಸೋನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.2017ರಲ್ಲಿ ಯುಪಿಎಸ್ ಸಿ ಆಯೋಗದ ಸದಸ್ಯರಾಗಿ ಆಯ್ಕೆಯಾದ್ದ ಮನೋಜ್ ಸೋನಿ, ಮೇ 16,2023ರಲ್ಲಿ ಅವರನ್ನು ಯುಪಿಎಸ್ ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮನೋಜ್ ಸೋನಿ ಯುಪಿಎಸ್ಸಿಗೆ ಸೇರುವ ಮೊದಲು ಎರಡು ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿದ್ದರು. ಇನ್ನು ಪೂಜಾ ಖೇಡ್ಕರ್ ವಿವಾದಕ್ಕೂ ಮನೋಜ್ ಸೋನಿ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ.