Ad imageAd image

ರೈಲ್ವೆ ಮಾರ್ಗಕ್ಕೆ ಭೂಮಿ ನೀಡಲು ಸರಕಾರಕ್ಕೆ ಒತ್ತಾಯ

Bharath Vaibhav
ರೈಲ್ವೆ ಮಾರ್ಗಕ್ಕೆ ಭೂಮಿ ನೀಡಲು ಸರಕಾರಕ್ಕೆ ಒತ್ತಾಯ
WhatsApp Group Join Now
Telegram Group Join Now

ಬೆಳಗಾವಿ: ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಜನತೆ ಕಳೆದ 20 ವರ್ಷಗಳಿಂದ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸುತ್ತಾ ಬಂದ ಪರಿಣಾಮವಾಗಿ 2016-17 ರಲ್ಲಿ ಸರ್ವೇ ಆಗಿ 2019 ರಲ್ಲಿ ಅಂದಾಜು ಪತ್ರಿಕೆ ಆಗಿದ್ದರೂ, ರೈಲ್ವೆ ಮಾರ್ಗ ಆಗಿಲ್ಲ. ಜನರ ಸೌಲಭ್ಯಕ್ಕಾಗಿ ಲೋಕಾಪೂರದಿಂದ ಧಾರವಾಡಕ್ಕೆ ರೈಲು ಮಾರ್ಗ ಮಾಡಲು ರಾಜ್ಯ ಸರಕಾರ ಭೂಮಿ ನೀಡುವುದಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕೆಂದು ಒತ್ತಾಯಿಸಿ ಸವದತ್ತಿಯಲ್ಲಿ ನಡೆದ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಕೂಡಲೇ ರಾಜ್ಯ ಸರಕಾರ ಲೋಕಾಪೂರದಿಂದ ಧಾರವಾಡದವರೆಗೆ ಹೊಸ ರೈಲ್ವೆ ಮಾರ್ಗ ಮಾಡಲು ಪ್ರಸ್ತಾವಣೆಯನ್ನು ನೀಡಬೇಕೆಂದು ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರೀಯಾ ಸಮಿತಿಯವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.

ರಾಜ್ಯದ ಮುಖ್ಯಮಂತ್ರಿಗಳು ಸವದತ್ತಿ ಯಲ್ಲಮ್ಮ ದೇವಸ್ಥಾನವು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ ಇದನ್ನು ನಾವು ಸ್ವಾಗತಿಸುತ್ತೇವೆ. ಇದರ ಜೊತೆಜೊತೆಗೆ ಶಕ್ತಿ ದೇವತೆಯಾದ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಒಂದು ವರ್ಷದಲ್ಲಿ 1ಕೋಟಿ 43 ಲಕ್ಷ ಜನ ಬಂದು ಹೋಗುತ್ತಾರೆ. ಈ ಭಕ್ತಾದಿಗಳಿಗೆ ರೈಲ್ವೆ ಸೌಲಭ್ಯ ಮಾಡಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ. ಈ ರೈಲ್ವೆ ಮಾರ್ಗ ಆಗಲು ಮಾನ್ಯ ಮುಖ್ಯಮಂತ್ರಿಗಳು ಮಾರ್ಗಕ್ಕೆ ಸಂಬಂಧಿಸಿ ಭೂಮಿ ನೀಡುತ್ತೇವೆಂದು ಪ್ರಸ್ತಾವಣೆ ಕೇಂದ್ರ ಸರಕಾರಕ್ಕೆ ಕಳಿಸಬೇಕೆಂದು ರೈಲ್ವೆ ಹೋರಾಟ ಕ್ರೀಯಾ ಸಮಿತಿಯ ಮುಖಂಡ ಜಿ.ಎಮ್.ಜೈನೆಖಾನ್ ಹೇಳಿದರು.

ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ದಾರವಾಡಕ್ಕೆ ರೈಲ್ವೆ ಮಾರ್ಗ ಮಾಡಬೇಕೆಂಬ ಕನಸು ನಮ್ಮ ಹಿಂದಿನ ಸಂಸದರಾದ ದಿವಗಂತ ಸುರೇಶ ಅಂಗಡಿಯವರ ಕನಸಾಗಿತ್ತು. ಇವತ್ತು ಅದು ನನಸಾಗಿದೆ. ಅದೇ ರೀತಿಯಲ್ಲಿ ರಾಮದುರ್ಗ ಹಾಗೂ ಸವದತ್ತಿ ಜನರು ರೈಲ್ವೆ ಮಾರ್ಗಕ್ಕಾಗಿ ಕಳೆದ 20 ವರ್ಷದಿಂದ ಹೋರಾಟ ಮಾಡುತ್ತಾ ಕನಸು ಕಾಣುತ್ತಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಈ ಭಾಗದ ಜನರ ಕನಸು ನನಸು ಮಾಡಬೇಕೆಂದು ಮಹಮ್ಮದಶಫಿ ಬೆಣ್ಣೆ, ಹಾಗೂ ಜಹುರ್ ಹಾಜಿ ಸರಕಾರಕ್ಕೆ ಒತ್ತಾಯಿಸಿದರು.

ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ಅರೆ ಬೆತ್ತಲೆಯಾಗಿ ಸವದತ್ತಿಯಲ್ಲಿ ಧರಣಿ ನಡೆಸುತ್ತಿರುವ ರೈಲ್ವೆ ಅಭಿವೃದ್ಧಿ ಸಮಿತಿಯ ರಾಜ್ಯಾಧ್ಯಕ್ಷರಾದ ಕುತುಬುದ್ದಿನ್ ಖಾಜಿ ರವರ ಹೋರಾಟ ಬೆಂಬಲಿಸಿ ಹಾಗೂ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಧರಣಿ ನಿರತ ಖಾಜಿಯವರ ಧರಣಿ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಬೇಕೆಂದು ರೈಲ್ವೆ ಸಮಿತಿ ಒತ್ತಾಯಸಿದರು.

ಈ ಸಂಧರ್ಭದಲ್ಲಿ ಎಸ್.ಜಿ.ಚಿಕ್ಕನರಗುಂದ, , ಜಹೂರ ಹಾಜಿ, ಸುಭಾಸ ಘೋಡಕೆ, B U ಭೈರಕದಾರ ಮಾತನಾಡಿದರು. ಕಾರ್ಮಿಕ ಮುಖಂಡರಾದ ನಾಗಪ್ಪ ಸಂಗೊಳ್ಳಿರವರು ಸ್ವಾಗತಿಸಿ ವಂದಿಸಿದರು.

ಈ ಸಂಧರ್ಭದಲ್ಲಿ ಡಿ ಎಫ್.ಹಾಜಿ, ದಾದಾಪೀರ ಕೆರೂರ ಮತ್ತು ಎ.ಆರ್.ಪಠಾಣ,ಶಶಿಕಾಂತ ನೆಲ್ಲೂರ, ರಾಜು ಮಾನೆ, ಮಂಜುನಾಥ ತರಗೋಲ, ಎಂ.ಕೆ.ಯಾದವಾಡ,ಮತ್ತು ರೈಲ್ವೆ ಸಮಿತಿಯ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!