Ad imageAd image

ಭೂ ರಹಿತರಿಗೆ ಭೂಮಿ ನಿವೇಶನ ,ವಸತಿ ರಹಿತರಿಗೆ ಮನೆ ಮೂಲ ಸೌಕರ್ಯಕ್ಕಾಗಿ ಒಕ್ಕರಿಲಿನ ಆಗ್ರಹ

Bharath Vaibhav
ಭೂ ರಹಿತರಿಗೆ ಭೂಮಿ ನಿವೇಶನ ,ವಸತಿ ರಹಿತರಿಗೆ ಮನೆ ಮೂಲ ಸೌಕರ್ಯಕ್ಕಾಗಿ ಒಕ್ಕರಿಲಿನ ಆಗ್ರಹ
WhatsApp Group Join Now
Telegram Group Join Now

ಸಿಂಧನೂರು :-ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಯಕರ್ತರ ಸಂಘ (AIARLA) ತಾಲೂಕ ಸಮಿತಿ ಸಿಂಧನೂರು..
ತಹಶೀಲ್ದಾರರು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ.. ದೇಶಕ್ಕೆ ಸ್ವತಂತ್ರ ದೊರೆತು 78 ವರ್ಷಗಳು ಗತಿಸಿದರು ಇಂದಿಗೂ ಅಸಂಖ್ಯಾ ಜನರಿಗೆ ಭೂಮಿ ನಿವೇಶನ ವಸತಿ ಹಾಗೂ ವಾಸಕ್ಕೆ ಕನಿಷ್ಠ ಮನೆಯಿಲ್ಲದೆ ಜೀವನ ಸಾಗಿಸುತ್ತಿದ್ದಾರೆ .

ಆಡಳಿತರೂಢ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಳೆದ ಏಳು ಎಂಟು ದಶಕಗಳಿಂದ ನೀಡಿದ ಆಶ್ವಾಸನೆಗಳು ಭರವಸೆಗಳು ಬರೀ ಕಾಗದ ಮೇಲೆ ಮಾತ್ರ ಅನುಷ್ಠಾನಕ್ಕೆ ಮಾತ್ರ ಕಾರ್ಯಗಳು ಇಲ್ಲದಂತಾಗಿವೇ ಲಕ್ಷಾಂತರ ರೈತರು ವರ್ಷಾನುಗಳಿಂದ ಬೆಳೆದ ಭತ್ತ.ಹಾರ ಧಾನ್ಯಗಳು ಉತ್ಪಾದನೆಗೆ ಗಣನೀಯ ಕೊಡುಗೆ ನೀಡುತ್ತಾ ಬಂದಿದ್ದಾರೆ ಬಹುತೇಕ ಜನರಿಗೆ ಜಮೀನು ಪಟ್ಟ ದೊರೆಯದೆ ಸರ್ಕಾರಿ ಇಲಾಖೆಗಳಿಗೆ ಅಲೆದಾಡುತ್ತಿದ್ದಾರೆ .

ಸೂರ್ ಇಲ್ಲದ ಬಡ ಕುಟುಂಬಗಳು ಮುರುಕ ಗುಡಿಸಲುಗಳಲ್ಲಿ ಬಿಸಿಲು ಮಳೆ ಹಾಗೂ ಚಳಿ ಗಾಳಿಯಲ್ಲಿ ಜೀವನ ನಡೆಸುತ್ತಿದೆ ಬಡವರು ಭೂಹಿತರು ನಿಷ್ಕೃಷ್ಟ ಸ್ಥಿತಿಯಲ್ಲಿ ತಮ್ಮದಲ್ಲದ ಕಾರಣಕ್ಕೆ ಲಕ್ಷಾಂತರ ಜನರು ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿರುವದು ಸರಕಾರಗಳ ಒಣಗೇಡಿತನದ ಆಡಳಿತಕ್ಕೆ ಸಾಕ್ಷಿಯಾಗಿದೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳು ವಸತಿ ಯೋಜನೆಗೆ ಭೂ ರಹಿತರಿಗೆ ಬಜೆಟ್ ಘೋಷಿಸುತ್ತ ಬಂದಿದೆ ನಿರಾಶ್ರತೆರಿಗೆ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಲು ಆಗಿಲ್ಲ ಇಂದಿಗೂ ಲಕ್ಷಾಂತರ ಕುಟುಂಬಗಳು ಮಳೆ ಗಾಳಿ ಚಳಿ ಹಾಗೂ ಬಿಸಿಲುನಲ್ಲಿ ಬೇಯುತ್ತಿದ್ದಾರೆ.

ಬಡವರಿಗೆ ಎಲ್ಲಾ ಸೌಕರ್ಯಗಳನ್ನು ನೀಡುವ ಸರ್ಕಾರ ನಿಷ್ಕಾಳಜಿ ವಹಿಸುವುದು ಸಂವಿಧಾನ ಭಾ ಹಿರವಾಗಿದೆ ಭೂ ಸಾಗುವಳಿಗೆ ಪಟ್ಟ ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ದಿನಗಳ ಕೆಲಸ ಮತ್ತು 600 ರೂಪಾಯಿ ಕೂಲಿ ಹೆಚ್ಚಿಸಿ ಭೂಕಬಳಿಕೆ ಸಂಬಂಧಿಸಿದ ಹೆಸರಿನಲ್ಲಿ ಸಣ್ಣ ಪುಟ್ಟ ರೈತರು ತಲೆತಲ ಮಾರು ಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲಿಬ್ಬಿಸುವ ಸರ್ಕಾರದ ನಿರ್ಧಾರವನ್ನು. ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಯಕರ್ತರು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತಗಳಾದ– ಆರ್. ಎಚ್. ಕಲ್ಮಂಗಿ. ತಾಲೂಕ ಸಂಚಾರಕರು.. ಬಸವರಾಜ ಕೊಂಡಿ.ಸಿಂಧನೂರು. ಶ್ರೀನಿವಾಸ್ ಬುಕ್ಕನಟ್ಟಿ. ಬಸವರಾಜ್ ಬೆಳಗುರ್ಕಿ. ರಾಘವೇಂದ್ರ ಹುಪ್ಪಳ. ಬಸವರಾಜ ರೈತ ನಗರ ಕ್ಯಾಂಪ್. ಹರಳಯ್ಯ ಕಲ್ಮಂಗಿ. ಶರಣಬಸವ ಅಂಬರೀಶ್ ಇನ್ನಿತರ ಇದ್ದರು….

ವರದಿ:- ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!