Ad imageAd image

ಉರುಕುಂದಿ ಈರಣ್ಣ ಸ್ವಾಮಿ ನೂತನ ಮೂರ್ತಿ ಪ್ರತಿಷ್ಟಾಪನೆ

Bharath Vaibhav
ಉರುಕುಂದಿ ಈರಣ್ಣ ಸ್ವಾಮಿ ನೂತನ ಮೂರ್ತಿ ಪ್ರತಿಷ್ಟಾಪನೆ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ 19ನೇ ವಾರ್ಡಿನಲ್ಲಿನ  ಉರುಕುಂದಿ ಈರಣ್ಣ ಸ್ವಾಮಿಯ ನೂತನ ಮೂರ್ತಿ ಸ್ಥಾಪನೆ, ಧ್ವಜಸಂಭ ಪ್ರತಿಷ್ಟಾಪನೆಯು ಸಿಂಧನೂರಿನ ರಂಭಾಪುರಿ ಶಾಖಾಮಠದ ಸೋಮನಾಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿತು.

ನಂತರ ಆಶೀವರ್ಚನ ನೀಡಿದ ಶ್ರೀಗಳು ನಾಗರಪಂಚಮಿಯಂದು ಸಂಕಲ್ಪ ಮಾಡಿಕೊಂಡು  ಈರಣ್ಣ ಸ್ವಾಮಿಯ ಪ್ರತಿಷ್ಟಾಪನೆಗೆ ಕಾರಣೀಭೂತರಾದ ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲೆಂದು ಹಾರೈಸಿದರು.

ಮೂರ್ತಿ ಪ್ರತಿಷ್ಟಾಪನೆ ನಿಮಿತ್ತ ದೇವಸ್ಥಾನ ಕಮಿಟಿಯಿಂದ ಮಹಾಮಂಗಳಾರತಿ, ತೀರ್ಥಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.

ಆರ್ಚಕ ಶರಣಯ್ಯ ಸ್ವಾಮಿ ನಾಗರ ಅಮವಾಸ್ಯೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರ ಸಹಕಾರದಿಂದ ಭಾನುವಾರದಂದು ತುಂಗಾಭದ್ರ ನದಿಯ ತೀರದಲ್ಲಿ ಗಂಗೆಪೂಜೆ, ದೇವಸ್ಥಾನದಲ್ಲಿ ಪಲ್ಲಕ್ಕಿಸೇವೆ ಜರುಗಿದವು.

ಸೋಮವಾರ ಗಣಪತಿ,  ಲಕ್ಷ್ಮಿನರಸಿಂಹ ಸ್ವಾಮಿ ಮೂರ್ತಿಯ ದಾನ್ಯಾದಿವಾಸ, ಶಯನಾದಿವಾಸ, ಪುಷ್ಪಾದಿವಾಸ, ವಸ್ತ್ರಾದಿವಾಸ, ಹೋಮ ಹವನಾದಿ ಕಾರ್ಯಕ್ರಮಗಳು ಜರುಗಿವೆ.

ಇಂದು ಶ್ರೀಗಳ ಅಮೃತ ಹಸ್ತದಿಂದ ಮೂರ್ತಿ ಪ್ರತಿಷ್ಟಾಪನೆ ಹಾಗೂ ಧ್ವಜಸ್ತಂಭ ಪ್ರತಿಷ್ಟಾಪನೆ ಮಾಡಲಾಯಿತು ಎಂದು ತಿಳಿಸಿದರು.

ಐದು ದಿನಗಳ ಕಾಲ ಜರುಗಿದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗಯ್ಯಸ್ವಾಮಿ, ಶಂಭುಲಿಂಗಯ್ಯ, ಮಂಜುನಾಥ, ಓಂಕಾರ, ಚಂದ್ರಸ್ವಾಮಿ, ಸಂದೀಪ್, ಬಸವರಾಜ, ವೀರೇಶ, ಚನ್ನಬಸವ ದೇವರಾಜ ಪೌರೋಹಿತ್ಯ ವಹಿಸಿದ್ದರು.

ಇದೇ ವೇಳೆ ನಗರಸಭೆ ಸದಸ್ಯ ಬಿ.ಎಮ್.ಅಪ್ಪಾಜಿ ನಾಯಕ, ತಾಲೂಕು ಪಂಚ ಗ್ಯಾರಂಟಿ ಯೋಜನಾ ಅನುಷ್ಟಾನ ಅಧ್ಯಕ್ಷ ಮಾರುತಿ ವರಪ್ರಸಾದರೆಡ್ಡಿ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶರೆಡ್ಡಿ, ಉಪಾಧ್ಯಕ್ಷ ವೀರೇಶ, ಹೆಚ್.ಆರ್.ರಂಗನಾಥಶೆಟ್ಟಿ, ಬಿ.ಸಿ.ಶ್ರೀಧರ, ಸುಂಕಪ್ಪ, ಮಲ್ಲೇಶಪ್ಪ, ಬಸವ ಹಾಗೂ ಭಕ್ತರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!