ಪೀಣ್ಯ,ದಾಸರಹಳ್ಳಿ: -ಪೀಣ್ಯ ಎರಡನೇ ಹಂತ ಸಮೀಪದ ಹೆಗ್ಗನಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ರಮೇಶ್ ಅವರ ಮಾಲಿಕತ್ವದ ನೂತನ ಎನ್.ಕೆ ಕ್ರಿಯೇಶನ್ಸ್ (ಗಾರ್ಮೆಂಟ್ಸ್ ಫ್ಯಾಕ್ಟರಿ)ಯ ಆವರಣದಲ್ಲಿ
ಮಹಾಲಕ್ಷ್ಮೀ ದೇವಿಯ ಪೂಜಾ ಮತ್ತು ಹೊಮ ಹವನಗಳು ವಿದ್ವಾನ್ ಪೊರೋಹಿತರಿಂದ ಪೂಜಾ ಕಾರ್ಯಕ್ರಮಗಳು ಜರುಗಿದವು.ಪೂಜಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಹಿಂದು ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್ ಭಾಗವಹಿಸಿ ಮಹಾ ಲಕ್ಷ್ಮೀ ದೇವಿಯ ಭಾವಚಿತ್ರಕ್ಕೆ ಅರಿಶಿಣ ಕುಂಕುಮ ಹೂವು ಹಣ್ಣು ಹಂಪಲುಗಳೊಂದಿಗೆ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಲೀಕ ರಮೇಶ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಶುಭಕೋರಿದರು.
ಈ ವೇಳೆ ಮಾತನಾಡಿದ ಅಂತರಾಷ್ಟ್ರೀಯ ಎಂದು ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್, ‘ಮಹಿಳಾ ಸಬಲೀಕರಣದಲ್ಲಿ ಗಾರ್ಮೆಂಟ್ಸ್ ಗಳ ಕೊಡುಗೆ ಅಪಾರ. ನಗರ ಬೆಳೆದಂತೆಲ್ಲ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಅದನ್ನು ನಿವಾರಿಸುವ ದಿಕ್ಕಿನಲ್ಲಿ ನಮ್ಮ ರಮೇಶ್ ಮಾಲೀಕತ್ವದ ಎನ್.ಕೆ ಕ್ರಿಯೇಷನ್ಸ್ ಜನರಿಗೆ ನೌಕರಿ ನೀಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಇವರ ಗಾರ್ಮೆಂಟ್ಸ್ ಉದ್ಯಮ ಉತ್ತುಂಗ ಮಟ್ಟಕ್ಕೆ ಬೆಳೆಯಲಿ’, ಎಂದು ಹಾರೈಸಿದರು.ಗಾರ್ಮೆಂಟ್ಸ್ ಉದ್ಘಾಟನೆಯ ಪ್ರಯುಕ್ತ ಪ್ರಸಾದ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ರಮೇಶ್ ರವರ ಧರ್ಮಪತ್ನಿ ರಮ್ಯಾ, ಮಗಳು ಜಾನವಿ, ಮಗ ನಿಖಿಲ್, ಇವರುಗಳು ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಾಂಡು ಕುಮಾರ್, ಮಹೇಶ್, ಶ್ರೀನಿವಾಸ್, ಮಾತೃಭೂಮಿ ಸಂಘದ ಅಧ್ಯಕ್ಷ ವಿಜಯ್, ಸುರೇಶ್, ಸಿದ್ದರಾಜು, ಮಂಜು ಹೆಗನಹಳ್ಳಿಯ ಸಮಸ್ತ ನಾಗರಿಕರು ಮಹಿಳೆಯರು ವಿವಿಧ ಕಂಪನಿಗಳ ಮಾಲೀಕರು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.
ವರದಿ:-ಅಯ್ಯಣ್ಣ ಮಾಸ್ಟರ್