ಗೋವಿಂದರಾಜು ಜಿಕೆ ಡಬ್ಲ್ಯೂ ಲೇಔಟ್ ರವರ ಹುಟ್ಟು ಹಬ್ಬದ ಶುಭ ಕೋರಿದ – ವಿ.ಆನಂದ್

Bharath Vaibhav
ಗೋವಿಂದರಾಜು ಜಿಕೆ ಡಬ್ಲ್ಯೂ ಲೇಔಟ್ ರವರ ಹುಟ್ಟು ಹಬ್ಬದ ಶುಭ ಕೋರಿದ – ವಿ.ಆನಂದ್
WhatsApp Group Join Now
Telegram Group Join Now

ಪೀಣ್ಯ ದಾಸರಹಳ್ಳಿ: ಭಾರತೀಯ ಸನಾತನ ಧರ್ಮದ ಸಂಸ್ಕೃತಿ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಚರಣೆಗೂ ಒಂದು ಅರ್ಥ ಇದ್ದೇ ಇರುತ್ತದೆ. ಆದರೆ ನಾವು ಇಂದಿನ ಕಾಲಮಾನದಲ್ಲಿ
ವಿದೇಶ ಸಂಸ್ಕೃತಿಗೆ ಮೊರೆ ಹೋಗಿದ್ದೇವೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಹೇಳಿದರು.

ಅವರು ತಮ್ಮ ಸಂಘಟನೆಯ ಯುವ ಮುಖಂಡ, ಬಲಗೈ ಭಂಟ ಹಾಗೂ ಲಕ್ಷ್ಮೀ ವೆಂಕಟೇಶ್ವರ ಫ್ಯಾಬ್ರಿಕೇಷನ ಕಂಪನಿ ಮಾಲೀಕ ಗೋವಿಂದರಾಜು ಜಿಕೆ ಡಬ್ಲ್ಯೂ ಲೇಔಟ್ ಅವರ ಹುಟ್ಟು ಹಬ್ಬವನ್ನು ಜಿಕೆ ಡಬ್ಲ್ಯೂ ಲೇಔಟ್ ರವೀಂದ್ರ ಕುಮಾರ್,ಶಂಕರ್, ಜೈ ಭಜರಂಗಿ ಆಟೋ ಚಾಲಕರ ಮುಖಂಡ ಶಿವಣ್ಣ, ಮಂಜುಶ್ರೀ ಎಂಟರ್ಪ್ರೈಸಸ್ ಮಾಲೀಕ ಸಿದ್ದಲಿಂಗ ಸ್ವಾಮಿ, ಪ್ರಕಾಶ್ ಪಾಂಡೆ, ಶ್ರೀಕಾಂತ್ ಇವರುಗಳ ಸಮ್ಮುಖದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ 2ನೇ ಹಂತದಲ್ಲಿರುವ ಅಂತರರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರದಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋವಿಂದರಾಜು ರವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿದರು ಹಿಂದೂ ಸಂಪ್ರದಾಯದಂತೆ ಜ್ಯೋತಿ ಬೆಳಗಿಸಿ ಕೆಕ್ ಕತ್ತರಿಸಿ ಸಿಹಿ ತಿನ್ನಿಸಿ ಹುಟ್ಟು ಹಬ್ಬದ ಶುಭ ಕೋರಿ ಮಾತಾಡಿದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಮಾತನಾಡಿದ ಅವರು ಈಗಿನ ಪರಿಸ್ಥಿತಿಯಲ್ಲಿ ಕೆಲವು ಆಚರಣೆಗಳನ್ನು ಬಿಡುತ್ತಾ ಬಂದಿದ್ದೇವೆ ಅಥವಾ ಅಂಥಾ ಆಚರಣೆಗಳಲ್ಲಿ ಮುಖ್ಯವಾದ ಒಂದು ಆಚರಣೆ ಹುಟ್ಟು ಹಬ್ಬ ಅಥವಾ ಜನ್ಮದಿನ. ಹಿಂದೂ ಸಂಪ್ರದಾಯದಲ್ಲಿ ನಾವು ಹುಟ್ಟಿನ ಘಳಿಗೆಗೆ ಬಹಳ ಅಮೂಲ್ಯ ಅರ್ಥ ನೀಡಲಾಗಿದೆ. ಹುಟ್ಟಿನ ಸಮಯದಲ್ಲಿ ಚಂದ್ರನ ಸ್ಥಾನ ಮುಖ್ಯವಾಗುತ್ತದೆ. ಇದನ್ನು ಆಧರಿಸಿ ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯ ಹೇಳಲಾಗುತ್ತದೆ ಎಂದು ವಿ.ಆನಂದ್ ಸಾರ್ವಜನಿಕರಿಗೆ ಹಿಂದೂ ಸಂಪ್ರದಾಯದ ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು, ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರಾದ ಅಯ್ಯಣ್ಣ ಮಾಸ್ಟರ್, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಅಹಿಂದ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ ಹೆಗ್ಗನಹಳ್ಳಿ, ಕೃಷ್ಣ ಮೂರ್ತಿ, ಶ್ರೀನಿವಾಸ್ ಕಿ ಮೇಕರ್ ಶಾಪ್ ಮಾಲೀಕ ರಂಗರಾಜು, ಸೇರಿದಂತೆ ಮುಂತಾದವರು ಇದ್ದು ಗೋವಿಂದ ರಾಜು ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!