Ad imageAd image

ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನೋದು ನನ್ನ ಆಸೆ : ವಿ. ಸೋಮಣ್ಣ 

Bharath Vaibhav
ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನೋದು ನನ್ನ ಆಸೆ : ವಿ. ಸೋಮಣ್ಣ 
WhatsApp Group Join Now
Telegram Group Join Now

ತುಮಕೂರು : ಒಂದು ಕಡೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅದಕ್ಕೆ ಇಲ್ಲ ಅಂತ ಹೇಳುತ್ತಿದ್ದಾರೆ ಮತ್ತೊಂದು ಕಡೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಜನವರಿ 6 ಅಥವಾ 9 ರಂದು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.

ಇದೀಗ ಕೇಂದ್ರ ರೈಲ್ವೆ ಸಚಿವ ಈ ಸೋಮಣ್ಣ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನೋದು ನನ್ನ ಆಸೆ ಅಂತ ಹೇಳಿ ಕುರ್ಚಿ ಕದನಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.

ತುಮಕೂರಿನ ಹೆಗ್ಗೆರೆ ಮೇಲ್ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಈ ಒಂದು ಹೇಳಿಕೆ ನೀಡಿದ್ದು, ಎಲ್ಲೋ ಒಂದು ಕಡೆ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನುವ ಆಸೆ ನನಗೂ ಇದೆ.

ಇದೆ ನನ್ನೊಬ್ಬನಿಗೆ ಆಸೆ ಅನ್ನುವುದಕ್ಕಿಂತ ಜಿಲ್ಲೆಯ ಜನರಿಗೆ ಆಸೆ ಇದೆ. ಅಧಿಕಾರ ಮತ್ತೊಂದು ಮಗದೊಂದು ಅದೃಷ್ಟದ ಮೇಲಿದೆ. ಜಿ.ಪರಮೇಶ್ವರ್ ಅವರು ಗೃಹ ಮಂತ್ರಿಗಳಾಗಿ ಆಗುತ್ತಾರೆ ಅನ್ನೋ ಕನಸು ಇರಲಿಲ್ಲ.

ಎಲ್ಲೋ ಒಂದು ಕಡೆ ನನಗೂ ಆಸೆ ಇದೆ ಸುರೇಶಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ. ಹಾಗಾಗಿ ನನಗೂ ವೈಯಕ್ತಿಕವಾಗಿ ಆಸೆ ಇದೆ ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಗಳು ಆಗಲಿ ನನ್ನೊನಿಗೆ ಪರಮೇಶ್ವರ ಮುಖ್ಯಮಂತ್ರಿ ಆಗಲಿ ಅಂತ ಅಲ್ಲ ಇಡೀ ಜಿಲ್ಲೆಯ ಮಹಾಜನತೆಗೆ ಆಸೆ ಇದೆ. ಡಿ ಡಿ ಕೆ ಶಿವಕುಮಾರ್ ಏನಾಗ್ಬೇಕು ಅನ್ನೋದಕ್ಕಿಂತ ಹಣೆಬರಹ ಏನಾಗುತ್ತದೆ ಅನ್ನುವುದು ದೊಡ್ಡದು ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!