Ad imageAd image

ಅಧ್ಯಕ್ಷ ಸ್ಥಾನಕ್ಕೆ ವೈಜಿನಾಥ ಭೋಸಗಿ ಅವಿರೋಧವಾಗಿ ಆಯ್ಕೆ

Bharath Vaibhav
ಅಧ್ಯಕ್ಷ ಸ್ಥಾನಕ್ಕೆ ವೈಜಿನಾಥ ಭೋಸಗಿ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಚಿಟಗುಪ್ಪ :-ತಾಲ್ಲೂಕಿನ ಕೋಡಂಬಲ್ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತ್ತು.ಅಧ್ಯಕ್ಷರಾಗಿ ವೈಜಿನಾಥ ಭೋಸಗಿ ಅವಿರೋಧವಾಗಿ ಆಯ್ಕೆಗೊಂಡರು.ನಂತರ ಆಯ್ಕೆಯಾದ ಅಧ್ಯಕ್ಷ ಸೇರಿ ಉಪಾಧ್ಯಕ್ಷರಿಗೂ ಕೂಡ ಸನ್ಮಾನಿಸಿ ಅಭಿನಂದನೆಗಳು ಸಲ್ಲಿಸಲಾಯಿತು.

ಬಳಿಕ ನೂತನ ಅಧ್ಯಕ್ಷ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಉಪಾಧ್ಯಕ್ಷ ಮಾತನಾಡಿ,ನನ್ನನ್ನು ಒಳಗೊಂಡು ಎಲ್ಲ ಸದಸ್ಯರು ಬೆಂಬಲ ನೀಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ನಂತರ ಗ್ರಾಮಸ್ಥರು ಅಧ್ಯಕ್ಷ ಉಪಾಧ್ಯಕ್ಷರ ಮೆರವಣಿಗೆ ಮಾಡಿದರು.ಈ ಸಂದರ್ಭದಲ್ಲಿ ಪಿಡಿಒ ಸಂಗಮೇಶ,ಸದಸ್ಯರಾದ ಶಿಲ್ಪಾ ಶಿವಪ್ಪಾ,ಸುವರ್ಣ, ಶಂಕರರಾವ,ಶಾರದಾಬಾಯಿ, ಹಣಮಂತ,ಕಾಶಮ್ಮಾ,ಸರಸ್ವತಿ,ವೈಜಿನಾಥ, ಶೋಭಾವತಿ,ಕವಿತಾ,ರಾಜಪ್ಪಾ,ಝರೆಪ್ಪಾ, ಸುಜಾತಾ,ರಾಮಶೆಟ್ಟಿ,
ಪ್ರಮುಖರಾದ ಬೀರಪ್ಪ ಮಾರ್ಥಂಡ,ಸಂಗಪ್ಪ,ವೀರಪ್ಪ ,ಶಿವಪುತ್ರ,ಸಚಿನ್ ಸೇರಿದಂತೆ ಅನೇಕರು ಇದ್ದರು.

ವರದಿ:-ಸಜೀಶ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!