Ad imageAd image

ಇಸ್ಕಾನ್ ಸಹಿತ ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

Bharath Vaibhav
ಇಸ್ಕಾನ್ ಸಹಿತ ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ
WhatsApp Group Join Now
Telegram Group Join Now

ಹುಬ್ಬಳ್ಳಿ : ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು ಎಲ್ಲೆಡೆ ಬೆಳಗಿನ ಜಾವದಿಂದಲೇ ವಿವಿಧ ದೇಗುಲಗಳಲ್ಲಿ ಶ್ರೀ ವೆಂಕಟೇಶ್ವರನಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿಸುತ್ತಿದ್ದಾರೆ.

ಹುಬ್ಬಳ್ಳಿ–ಧಾರವಾಡದ ಮಧ್ಯದಲ್ಲಿರುವ ರಾಯಾಪುರದ ಇಸ್ಕಾನ್ ಮಂದಿರದಲ್ಲಿ ಭಕ್ತಿಭಾವ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಿಗ್ಗೆ ೮:೦೦ ಗಂಟೆಗೆ ಭಕ್ತರ ದರ್ಶನಕ್ಕಾಗಿ ದೇವಾಲಯವನ್ನು ತೆರೆಯಲಾಗಿದ್ದು, ೮:೩೦ ಗಂಟೆಗೆ ಪವಿತ್ರ ವೈಕುಂಠ ದ್ವಾರವನ್ನು ವಿಧಿವಿಧಾನಪೂರ್ವಕವಾಗಿ ತೆರೆಯಲಾಯಿತು. ಈ ಮೂಲಕ ಸಾವಿರಾರು ಭಕ್ತರು ದ್ವಾರವನ್ನು ದಾಟಿ ಶ್ರೀ ಶ್ರೀ ಗರುಡ ಸೇವಾ ಶ್ರೀ ಶ್ರೀ ಲಕ್ಷ್ಮೀ ನಾರಾಯಣರ ವಿಶೇಷ ಕೃಪೆಯನ್ನು ಪಡೆದರು.

ದೇವಾಲಯದ ವಾತಾವರಣ ಸಂಪೂರ್ಣವಾಗಿ ಆಧ್ಯಾತ್ಮಿಕ ಶಕ್ತಿಯಿಂದ ತುಂಬಿಕೊAಡಿತ್ತು. ಸಂಜೆ ೫:೦೦ ಗಂಟೆಗೆ ಶಾಂತಿ, ಸಮೃದ್ಧಿ ಮತ್ತು ಆತ್ಮೋನ್ನತಿಗಾಗಿ ಶ್ರೀ ವೆಂಕಟೇಶ್ವರ ಹೋಮವನ್ನು ವಿಧಿವಿಧಾನಪೂರ್ವಕವಾಗಿ ನೆರವೇರಿಸಲಾಯಿತು.
ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜನಸಾಗರವೇ ನೆರೆದಿದ್ದು ಬೆಂಗಳೂರಿನ ಪ್ರಸಿದ್ಧ ದೇಗುಲ ಇಸ್ಕಾನ್, ವೈಯಾಲಿಕಾವಲ್ ಟಿಟಿಡಿ ಹುಬ್ಬಳ್ಳಿಯ ರಾಯಾಪುರದ ಇಸ್ಕಾನ್ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿವೆ.

ಧಾರವಾಡದಲ್ಲಿ ವೈಕುಂಠ ಏಕಾದಶಿ: ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ. ಶ್ರೀಹರಿ ಸೇವೆಯಲ್ಲಿ ವರ್ಷದ ಪರ್ಯಾಯ ಅರ್ಚಕರಾದಸತ್ಯನಾರಾಯಣ ವೆಂಕಟೇಶ್ ಅವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿ- ವೆಂಕಟೇಶ್ವರ ದೇವಸ್ಥಾನ ಮಣಕಿಲ್ಲಾ, ಧಾರವಾಡದಲ್ಲಿ ವಿಷ್ಣು ಸಹಸ್ರನಾಮ ಪಟಿಸಿ, ಒಂದು ಲಕ್ಷ ತುಳಸಿ ಅರ್ಚನೆಯನ್ನು ಮತ್ತು ಸದ್ಬಕ್ತರಿಗೆ ಉತ್ತರಾಭಿಮುಖದ ವೈಕುಂಠದ ದ್ವಾರವನ್ನು ನಿರ್ಮಿಸಿ, ಶ್ರೀದೇವರ ದರ್ಶನಕ್ಕೆ ಅನುಕೂಲ ಮಾಡಲಾಗಿತ್ತು.

ವರದಿ : ಸುಧೀರ್ ಕುಲಕರ್ಣಿ ‌

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!