Ad imageAd image

ವಾಲ್ಮೀಕಿ ಹಗರಣ : ಕಾಂಗ್ರೆಸ್ ನ ಸಂಸದ, ಇಬ್ಬರು ಶಾಸಕರ ಮೇಲೆ ಇಡಿ ದಾಳಿ

Bharath Vaibhav
ವಾಲ್ಮೀಕಿ ಹಗರಣ : ಕಾಂಗ್ರೆಸ್ ನ ಸಂಸದ, ಇಬ್ಬರು ಶಾಸಕರ ಮೇಲೆ ಇಡಿ ದಾಳಿ
WhatsApp Group Join Now
Telegram Group Join Now

ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಳ್ಳಾರಿಯಲ್ಲಿ ಸಂಸದ ಇ ತುಕಾರಾಂ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ತುಕಾರಾಂ ಅವರ ಪಾತ್ರ ಇದೆ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ಇ ತುಕಾರಾಂ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಅಲ್ಲದೆ ಶಾಸಕರಾದ ನಾರಾ ಭರತ್ ರೆಡ್ಡಿ ಮತ್ತು ಕಂಪ್ಲಿ ಗಣೇಶ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಮಾಜಿ ಸಚಿವ ನಾಗೇಂದ್ರ ಪಿ ಎ ಗೋವರ್ಧನಗು ಇಡಿ ಶಾಕ್ ನೀಡಿದೆ.

ಸಂಡೂರಿನಲ್ಲಿರುವ ಸಂಸದ ತುಕಾರಾಂ ಮನೆಯಲ್ಲಿ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿತ್ತು.

ಇತ್ತೀಚಿಗೆ ಅವರು ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಸಂಸದ ತುಕಾರಾಂ ಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!