ನವದೆಹಲಿ : ವಂದೇ ಮೆಟ್ರೋ ಸೇವೆಯನ್ನು ‘ನಮೋ ಭಾರತ್ ರಾಪಿಡ್ ರೈಲ್’ ಎಂದು ಮರುನಾಮಕರಣ ಮಾಡುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ಗೆ ಭೇಟಿ ನೀಡುವ ಸಂದರ್ಭದಲ್ಲಿ ಭಾರತದ ಮೊದಲ ನಮೋ ಭಾರತ್ ರಾಪಿಡ್ ರೈಲು ಮತ್ತು ಇತರ ಹಲವಾರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಉದ್ಘಾಟನಾ ಪ್ರಯಾಣವು ಭುಜ್ ನಿಂದ ಪ್ರಾರಂಭವಾಗಿ ಅಹಮದಾಬಾದ್ ತಲುಪಲಿದ್ದು, ಕೇವಲ 5 ಗಂಟೆ 45 ನಿಮಿಷಗಳಲ್ಲಿ 359 ಕಿಲೋಮೀಟರ್ ಕ್ರಮಿಸಲಿದೆ. ಪ್ರಯಾಣಿಕರಿಗೆ ನಿಯಮಿತ ಸೇವೆ ಸೆಪ್ಟೆಂಬರ್ 17 ರಂದು ಪ್ರಾರಂಭವಾಗಲಿದ್ದು, ಇಡೀ ಪ್ರಯಾಣಕ್ಕೆ ಟಿಕೆಟ್ ಬೆಲೆ 455 ರೂ.
ಈ ರೈಲು ಗರಿಷ್ಠ 110 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧೃಂಗಧ್ರಾ, ವಿರಾಮ್ಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಕಲುಪುರ್ (ಅಹಮದಾಬಾದ್ ನಿಲ್ದಾಣ) ನಿಲ್ದಾಣಗಳಲ್ಲಿ ನಿಲ್ಲುತ್ತದೆ.