ಬೆಂಗಳೂರು : ಕ್ಷೇತ್ರದ ಹೆಗ್ಗನಹಳ್ಳಿ ಬಿಜೆಪಿಯ ಮಾಜಿ ಪಾಲಿಕೆ ಸದಸ್ಯೆ ಶ್ರೀಮತಿ ಭಾಗ್ಯಮ್ಮ ಕೃಷ್ಣಯ್ಯ ಅವರ ಸ್ವಗ್ರಹದಲ್ಲಿ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ಲಕ್ಷ್ಮಿ ಮೂರ್ತಿಗೆ ವಿವಿಧ ಹೂವುಗಳನ್ನು ಮುಡಿಸಿ, ಬಗೆ ಬಗೆಯ ಸಿಹಿ ಪದಾರ್ಥ, ಹಣ್ಣು ನೈವೇದ್ಯ ದೊಂದಿಗೆ ನಾಣ್ಯವನ್ನಿಟ್ಟು ಮಹಾ ಮಂಗಳಾರತಿ ಮಾಡಿದರು ನಂತರ ನೆರೆದಿದ್ದ ಜನರಿಗೆ ತೀರ್ಥ ಪ್ರಸಾದ ಮತ್ತು ಪ್ರೀತಿಯ ಭೋಜನ ಸ್ವೀಕರಿಸಿ ದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ರಾಜಕಾರಣಿ ಹಾಗೂ ಮುಖಂಡ ಕೃಷ್ಣಯ್ಯ ಅವರ ಕುಟುಂಬದ ಸದಸ್ಯರು ಅಪಾರ ಅಭಿಮಾನಿಗಳು ಲಕ್ಷ್ಮಿ ದರ್ಶನ ಪಡೆದರು.




