ಮುದಗಲ್ : ಶ್ರೀ ರಾಮಲಿಂಗೇಶ್ವರ 11ನೇ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗುತ್ತವೆ ಎಂದು ದೇವಸ್ಥಾನದ ಕಮಿಟಿ ಅಧ್ಯಕ್ಷ ಸುರೇಂದ್ರ ಗೌಡ ಪಾಟೀಲ್ ಆದಾಪುರ ಹೇಳಿದರು.
ಸೋಮವಾರ ಪಟ್ಟಣದ ಇತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪತ್ರಿಕಾ ಸುದ್ದಿ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷ ಕೂಡ ಕಿಲ್ಲಾದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗುತ್ತದೆ.
2000 ಇಸ್ವಿಯಲ್ಲಿ 50 ಕ್ವಿಂಟಲ್ಗೆ ಪ್ರಾರಂಭಿಸಲಾದ ಅನ್ನ ದಾಸೋಹ ಇಲ್ಲಿಯವರೆಗೆ 100 ಕ್ವಿಂಟಲ್ಗೆ ತಲುಪಿದೆ.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಶ್ರೀ ಬೂದಿಶ್ವರ ಸಂಸ್ಥಾನ ಮಠ ಅಂತೂರು ಬೆಂತೂರ ಶ್ರೀ ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮನ ಶುದ್ಧಿಯೊಂದಿಗೆ ಸಾಯಂಕಾಲ ದಿನಾಂಕ .2 -03-25 ರಿಂದ 12-03-25 ವರೆಗೆ 11 ದಿನಗಳ ಕಾಲ ಜನ ಕಲ್ಯಾಣಕ್ಕಾಗಿ ತಪೋನುಷ್ಠಾನ ಕೈಗೊಂಡಿದ್ದಾರೆ.
ಹಾಗೂ ಲೋಕಕಲ್ಯಾಣಕ್ಕಾಗಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ, ಸಮೃದ್ಧ ಬೆಳೆ, ರೈತರ ಸಂಕಷ್ಟ, ನಿರುದ್ಯೋಗ ನಿವಾರಣೆ, ವ್ಯಾಪಾರ ಉದ್ಯಮ ಅಭಿವೃದ್ಧಿ ಹೊಂದಿ ದೇಶದಲ್ಲಿ ಶಾಂತಿ, ದೇಶದ ರಕ್ಷಣೆಗೆ ನಿಂತ ಸೈನಿಕರ ರಟ್ಟೆಗೆ ಶಕ್ತಿಯ ಸಂಕಲ್ಪ ಮಾಡಿಕೊಂಡು 58ನೇ ಮೌನಾನುಷ್ಠಾನ ಹಮ್ಮಿ ಕೊಂಡಿದ್ದಾರೆ. 14ನೇ ಶಿವಯೋಗ ಸಮಾಧಿ ಸ್ಥಿತಿಯಲ್ಲಿ ಇದ್ದು. ದಿನಾಂಕ – 23 ರಂದು ಶಿವಯೋಗ ಸಮಾಧಿ ಸ್ಥಿತಿ ಮಂಗಲ ಎಲ್ಲಾ ಪೂಜ್ಯರ ಸಮಕ್ಷಮದಲ್ಲಿ ಮಧ್ಯಾಹ್ನ 1ಕ್ಕೆ ಧರ್ಮಸಭೆ ಜರುಗುತ್ತದೆ. ಪ್ರತಿ ದಿನ ಸಾಯಂಕಾಲ ದೇವಸ್ಥಾನದಲ್ಲಿ ರುದ್ರಾಭಿಷೇಕ, ರುದ್ರಯಾಗ, ಶಿವನಾಮ ಭಜನೆ 1 ಲಕ್ಷ ಬಿಲ್ವಾರ್ಚನೆಯ ಪೂಜಾ ಕೈಂಕರಗಳು ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ
ಶ್ರೀ ಗಂಗಾಧರ್ ಸ್ವಾಮಿಗಳ ನೇತೃತ್ವದಲ್ಲಿ ಧಾರ್ಮಿಕ ಆಚರಣೆ ಕಾರ್ಯ ಜರುಗುತ್ತದೆ. ದಿನಾಂಕ 13 -3-25 ರಿಂದ .23-03-25 ರ ವರೆಗೆ ಪ್ರತಿದಿನ ಸಾಯಂಕಾಲ 7ಕ್ಕೆ ಯಾದಗಿರಿ ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿ ಕೇಳಗಿಮಠ ಇವರಿಂದ ಪ್ರವಚನ ಜರುಗುತ್ತದೆ.
ದಿನಾಂಕ .16-03-25 ರಂದು ಬೆಳಿಗ್ಗೆ ಮುದುಗಲ್ ಇತಿಹಾಸ ಹಾಗೂ ಶ್ರೀ ರಾಮಲಿಂಗೇಶ್ವರ ಇತಿಹಾಸದ ತುಣುಕುಗಳು ಪ್ರದರ್ಶಿತಗೊಳಿಸಲಾಗುತ್ತದೆ ಹಾಗೂ ಸಾಯಂಕಾಲ ಶ್ರೀ ರಾಮಲಿಂಗೇಶ್ವರ ರಥೋತ್ಸವ ಜರಗುತ್ತದೆ ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳು ಲಿಂಗಪ್ಪ ಹಣಗಿ, ಗುರುಬಸಪ್ಪ ಸಜ್ಜನ್, ಮಲ್ಲಪ್ಪ ಮಟೂರ್ ಮಾತನಾಡಿದರು. ಈ ವೇಳೆ ಮಹೇಶ ವಸ್ತ್ರದ, ವಿಶ್ವನಾಥ್ ದೇಸಾಯಿ, ಉದಯ ಕಮ್ಮಾರ, ನಾಗರಾಜ ದಫೇದಾರ ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ




