ಚಾಮರಾಜನಗರ: ತಾಲೂಕಿನ ಇರಸವಾಡಿ ಗ್ರಾಮದ ನೂತನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗಂಗವಾಡಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿಬಿ ವಸಂತ್ ಕುಮಾರ್ ಆಯ್ಕೆಯಾಗಿದ್ದಾರೆ
ಇರಸವಾಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಹದಿನೈದು ಜನ ಸದಸ್ಯರುಗಳಿದ್ದು ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಚಿನ್ನಮ್ಮ ಎಂಬುವರ ವಿರುದ್ಧ ಹತ್ತು ಮತಗಳನ್ನು ಪಡೆದು ಜಿಬಿ ವಸಂತ್ ಕುಮಾರ್ ರವರು ಗೆಲುವನ್ನು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಸಂತ್ ಕುಮಾರ್ ಮಾತನಾಡಿ ನನ್ನ ಗೆಲುವಿಗೆ ಕಾರಣ ಕರ್ತರಾದ ನನ್ನ ಹತ್ತು ಜನ ಸದಸ್ಯರುಗಳಿಗೆ ಹಾಗೂ ನನ್ನ ಗೆಲುವಿಗೆ ಸಹಕರಿಸಿದ ಸ್ನೇಹಿತರಿಗೆ ಮುಖಂಡರುಗಳಿಗೆ ಧನ್ಯವಾದಗಳು ತಿಳಿಸುತ್ತೇನೆ ನನ್ನನ್ನು ಆಯ್ಕೆ ಮಾಡಿದ ನನ್ನ ಗಂಗಾವಡಿ ಗ್ರಾಮದ ಜನರಿಗೆ ಮತ್ತು ನನ್ನ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಿಗೆ ಒಳ್ಳೆಯ ರೀತಿಯ ಪ್ರಾಮಾಣಿಕರಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇರಸವಾಡಿ ಆರ್.ಅಶೋಕ್ ಕುಮಾರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರು ಯರಗಂಬಳ್ಳಿ ಮಲ್ಲು, ವೈ. ಕೆ ಮೋಳೆ ನಂಜುಂಡಸ್ವಾಮಿ, ಸದಸ್ಯರು ಸುರೇಶ್, ಕಾಳೆಗೌಡ, ಕಮಲಾಕ್ಷಿ ಮಹದೇವ್, ರವಿ, ಚಿಕ್ಕತಾಯಮ್ಮ ನಾಗರಾಜು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




