ನಿಪ್ಪಾಣಿ: ಹೌದು ತನ್ನ ಪತಿಯ ದೀರ್ಘಾಯುಷ್ಯ ಬಯಸಿ ಏಳೇಳು ಜನ್ಮಕ್ಕೂ ನನಗೆ ನನ್ನ ಪತಿ ಪ್ರಾಪ್ತವಾಗಲೆಂದು ಹರಕೆ ಹೊತ್ತು ಮುತ್ತೈದೆಯರು ವಟಸಾವಿತ್ರಿ ವ್ರತ ಆಚರಿಸುತ್ತಾರೆ.
ಯಮನನ್ನೇ ಎದುರು ಹಾಕಿಕೊಂಡು ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದ ಸತಿ ಸಾವಿತ್ರಿಯ ಪತಿವ್ರತೆಯ ಪ್ರತೀಕವಾಗಿ ವಟ ಸಾವಿತ್ರಿವೃತ ಆಚರಿಸಲಾಗುತ್ತಿದೆ ಎಂದು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವ ಸದಲಗಾ ಪಟ್ಟಣದ ಸ್ನೇಹಾ ಸುನಗಾರ್ ಬಿವಿ ಫೈವ್ ನ್ಯೂಸ್ ಗೆ ತಿಳಿಸಿದರು.
ಇದೇವೇಳೆ ಬೊರಗಾವ ಪಟ್ಟಣದ ವೃತಸ್ಥರಾದ ನೀತಾ ಜನವಾಡೆ ಹಾಗೂ ಮಹಾದೇವಿ ಮಹಾಜನ ಮಾತನಾಡಿದರು.ಹಾಗಾದರೆ ಬನ್ನಿ ವಟ ಸಾವಿತ್ರಿ ವ್ರತದ ಮಹತ್ವ ಯಾವ ರೀತಿ ವ್ರತವನ್ನು ಆಚರಿಸಲಾಗುತ್ತದೆ ಮುತ್ತೈದೆಯರಿಂದ ಉಡಿ ತುಂಬುವುದು, ಅರಸಿನ ಕುಂಕುಮ ಸೌಭಾಗ್ಯ,ಉಪವಾಸ ವೃತ,ಆಲದ ಮರಪೂಜೆ ಹೀಗೆ ಅನೇಕ ದೃಶ್ಯಗಳನ್ನು ನಮ್ಮ ನಿಪ್ಪಾಣಿ ವರದಿಗಾರರು ಕೆಮರಾದಲ್ಲಿ ಸೆರೆ ಹಿಡಿದಿದ್ದು ಗಡಿ ಭಾಗದ ಚಿಕ್ಕೋಡಿಯ ಹಾಗೂ ನಿಪಾಣಿ ತಾಲೂಕಿನ ಹಳ್ಳಿಗಳಾದ ಬೋರಗಾವ ಸದಲಗಾ ಪಟ್ಟಣದಲ್ಲಿಯ ವ್ರತಸ್ತೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವರದಿ:ಮಹಾವೀರ ಚಿಂಚಣೆ




