—————————————ವಾರ್ಷಿಕ ಸಭೆಯಲ್ಲಿ ಬಾಳಾಸಾಹೇಬ ಪಾಟೀಲರಿಂದ ಮಾಹಿತಿ
ನಿಪ್ಪಾಣಿ: ಸ್ಮರ್ಧಾತ್ಮಕ ದಿನಗಳಲ್ಲಿಂದು , ಮಿತ ಖುರ್ಚು, ಪಾರದರ್ಶಕ ಆಡಳಿತ, ಗ್ರಾಹಕರಿಗೆ ಠೇವದಾರರಿಗೆ ಸಕಾಲಕ್ಕೆ ಸೇವೆ ಒದಗಿಸುವುದರೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದ್ದರಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಶ್ರೀ ವೀರಾಚಾರ್ಯ ಅಲ್ಪಸಂಖ್ಯಾತರ ಸೌಹಾರ್ದ ವಿವಿಧ ಉದ್ದೇಶಗಳ ಸಹಕಾರಿ ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 75 ಲಕ್ಷ 4ಸಾವಿರ ರೂಪಾಯಿ ಲಾಭ ಬಂದಿರುವುದಾಗಿ ಸಂಸ್ಥೆಯ ಸಂಸ್ಥಾಪಕ ಬಾಳಾಸಾಹೇಬ ಪಾಟೀಲ ತಿಳಿಸಿದರು.
ಅವರು ಸಂಸ್ಥೆಯ 23ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಚಂದ್ರಕಾಂತ್ ಧೂಳಾ ಸಾವಂತ್, ಸವಿಂದರ ಪಾಟೀಲ, ಶ್ರೇಣಿಕ್ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಸಂಸ್ಥೆಯ ನಿರ್ದೇಶಕ ಬಾಳಾ ಸಾಹೇಬ ಮಗದುಮ್ ಅವರಿಂದ ಭಾವಪೂರ್ಣ ಶ್ರದ್ಧಾಂಜಲಿ. ನಂತರ ವೇದಿಕೆಯಲ್ಲಿಯ ಗಣ್ಯರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವೀರಾಚಾರ್ಯ ಶಿಷ್ಯ ವೃತ್ತಿ, ನೀಡಿ ಸನ್ಮಾನಿಸಲಾಯಿತು.
ಇದೇ ಸಮಯದಲ್ಲಿ ಬಾಳಾಸಾಹೇಬ ಪಾಟೀಲರಿಂದ ವರದಿ ವಾಚನ, ಪ್ರವೀಣ ಪಾಟೀಲರಿಂದ ಲಾಭ ಹಾನಿ ಅಂದಾಜು ಪತ್ರಿಕೆ ವಾಚನ ಮಾಡಿ ಸದಸ್ಯರಿಂದ ಮಂಜೂರಿ ಪಡೆದರು.
ಸಭೆಯಲ್ಲಿ ಸಂಸ್ಥೆಯ ಸಾಂಪತಿಕ ಸ್ಥಿತಿ ವಿವರಿಸಲಾಯಿತು. ವಾರ್ಷಿಕ ಸಭೆಯಲ್ಲಿ ದತ್ತ ಕಾರ್ಖಾನೆ ಸಂಚಾಲಕ ಇಂದ್ರಜಿತ್ ಪಾಟೀಲ್ ಸುನಿಲ್ ನಾರೆ, ಅಧ್ಯಕ್ಷ ಮಹೇಂದ್ರ ಪಾಟೀಲ, ಉಪಾಧ್ಯಕ್ಷ ಸಿದ್ದ ಗೌಡ ಕೆಸ್ತೇ, ನಿರ್ದೇಶಕರಾದ ಸಂಜಯ್ ಪಾಟೀಲ ಸಂಜಯ ಅಲಗುರೆ, ಮಹಾವೀರ್ ಹಿರೇ ಕುಡಿ, ಅಜಿತ್ ಪಾಟೀಲ, ಪ್ರಕಾಶ್ ತೇರ್ದಾಳೆ, ಅಭಯ ಕುಮಾರ್ ಬಾಗಾಜಿ, ಉತ್ತಮ ಸಮಗೆ, ಸಂಜಯ ಮಗದುಮ, ಮಹಾವೀರ್ ಧನಾಪಗೋಳ,ಉತ್ತಮ ಹೆಬ್ಬಳೇ, ನಿತಿನ್ ವನಕುದ್ರೆ, ನ್ಯಾಯವಾದಿ ರವಿರಾಜ್ ಪಾಟೀಲ, ಲೆಕ್ಕ ಪರಿಶೋಧಕ ಎಸ್. ಬಿ. ಹೊನ್ನವಾಡೆ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ



