ಸಿಂದಗಿ: ತಾಲೂಕಿನ ಕೊಕಟನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವೀರನಗೌಡ ಪಾಟೀಲ ಹಾಗೂ ಉಪಾಧಕ್ಷರಾಗಿ ಅಬ್ದುಲಗಫುರ ಮುಜಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೀರನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುಲಗಫುರ ಮುಜಾವರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಲೀಲಾವತಿಗೌಡ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಸದಸ್ಯರಾದ ಸಿದ್ದಪ್ಪ ಜಾಲವಾದಿ, ರಾವುತಪ್ಪ ಕನ್ನೂರ, ಕೌಸರಬಾನು ಭಾಗವನ, ಲಕ್ಷ್ಮಿಬಾಯಿ ವಾಲೀಕಾರ, ಆರತಿ ಗೋಣಿ, ಯಮನಪ್ಪ ಬ್ಯಾಕೋಡ, ಯಲ್ಲಪ್ಪ ಹರಿಜನ, ಕಾರ್ಯದರ್ಶಿ ಚನ್ನಪಗೌಡ ಪ್ರಭುಗೋಳ, ಗ್ರಾಮಸ್ಥರಾದ ಎಸ್.ಕೆ ಪೂಜಾರಿ, ಫಕೃದ್ದಿನ ಕುಮಸಗಿ, ಹೂವಪ್ಪ ಕನ್ನೂರ, ಎಸ್.ಎಂ.ಮಠ, ರವಿ ಬಮ್ಮನಹಳ್ಳಿ, ಕಾಂತು ಬ್ಯಾಕೋಡ, ಶಂಕರಲಿಂಗ ಗೋಣಿ, ಸದ್ದಾಂ ಮುಜಾವರ, ಇಸ್ಮಾಯಿಲ್ ಭಾಗವಾನ, ಶ್ರೀಕಾಂತ ಸಂಗೋಗಿ, ಸಂಗಪ್ಪ ಹರನಾಳ, ಮಲಕಪ್ಪ ಕಟ್ಟಿಮನಿ, ಇಸಾಕ ಮುಲ್ಲಾ,ನಿಂಗು ಮೂಲಿಮನಿ ಸೇರಿದಂತೆ ಅನೇಕರಿದ್ದರು.