ವೀರಾಪುರ: ಹೌದು ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮ ದೇವತೆ ಶ್ರೀ ಸತ್ಯಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ 2 ನೇ ದಿವಸದ ಕಾರ್ಯಕ್ರಮ ನಿಮಿತ್ಯ ಏರ್ಪಡಿಸಿದ್ದ ಗುರುದರ್ಶನ ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಕರು ಹಾಗೂ ಖ್ಯಾತ ಆಧ್ಯಾತ್ಮಿಕ ಪ್ರವಚನಕಾರರು ಆದ ಮೃತ್ಯುಂಜಯ ಹಿರೇಮಠರವರ ಸೇವಾ ನಿವೃತ್ತಿ ನಿಮಿತ್ಯ ವೀರಾಪುರ ಗ್ರಾಮಸ್ಥರು ಹಾಗೂ ಶ್ರೀ ಸತ್ಯಮ್ಮ ದೇವಿ ಟ್ರಸ್ಟ್ ಕಮಿಟಿ ವತಿಯಿಂದ ಗೌರವಪೂರ್ವಕವಾಗಿ ಪುಷ್ಪ ನಮನ ಸಲ್ಲಿಸಿ ಗೌರವ ಪೂರ್ವಕವಾಗಿ ಗುರು ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ವೀರಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಸರ್ಕಾರಿ ಹಿಂದಿ ಸಹ ಶಿಕ್ಷಕ ಪ್ರೇಮ ಚಂದ್ ಕಮ್ಮಾರವರನ್ನು ಸಹ ಸನ್ಮಾನ ಮಾಡುವುದರೊಂದಿಗೆ ಗುರು ನಮನ ಸಲ್ಲಿಸಿಲಾಯಿತು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಪ್ರವಚನಕಾರ ಮೃತ್ಯುಂಜಯ ಹಿರೇಮಠರವರು ಗುರುವಿನ ಮಹತ್ವದ ವಿಷಯದ ಬಗ್ಗೆ ಸಮಗ್ರವಾಗಿ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ದಿವ್ಯಸಾನಿದ್ಯ ವಹಿಸಿದ ದೊಡ್ಡವಾಡ ಶ್ರೀ ಜಡಿ ಸಿದ್ದೇಶ್ವರ ಮಹಾಸ್ವಾಮಿಜಿ, ಹೋನ್ಯಳ ಶ್ರೀಗಳಾದ ಬಸವರಾಜ ದೇವರು, ಕುಮಾರಿ ಶಂಭಾವಿ ಹಿರೇಮಠ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಹೊಳಿ, ಮುಖಂಡ ಬಸನಗೌಡ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಆಲಿ ಸಾಬ್ ತೇಲಗಡೆ, ಮಂಜು ಸಾದುನವರ್, ಸಂಗಪ್ಪ ಪಿಶೆಣ್ಣನವರ್, ಶಿವಾನಂದ ಹಿರೇಮಠ, ವಿರುಪಾಕ್ಷಯ್ಯ ಗುಂಡಕಲ್ ಮಠ, ಸೋಮನಗೌಡ ಪಾಟೀಲ್ ಸೇರಿದಂತೆ ಎಲ್ಲಾ ಗಣ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತಿಯಾದ ಗೌರವಾನ್ವಿತರ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಸಹ ಗೌರವದ ನುಡಿಗಳನ್ನು ಆಡಿದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಶಿವಯ್ಯ ಗುಂಡಕಲ್, ಶಿವಪ್ಪ ಮರಕಟ್ಟಿ, ಸೋಮು ಅಂಬಡಗಟ್ಟಿ ನಡೆಸಿಕೊಟ್ಟರು. ಒಟ್ಟಾರೆ ಅರ್ಥಪೂರ್ಣವಾಗಿ ಗೌರವ ನಮನ ಸಲ್ಲಿಸಲಾಯಿತು.
ವರದಿ: ಶ್ರೀ ಬಸವರಾಜು