ಮಲ್ಲಮ್ಮನ ಬೆಳವಡಿ: ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮಳ ಪ್ರಾಧಿಕಾರಕ್ಕೆ ಬೇಡಿಕೆ ಮಲ್ಲಮ್ಮನಬೆಳವಡಿ ಗ್ರಾಮಸ್ಥರಿಂದ ಸನ್ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ಬಿ. ಭಾಸ್ಕರ್ ಅವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಬೇಡಿಕೆಗಾಗಿ ಮನವಿ ಸಲ್ಲಿಸಲಾಯಿತು.
ಶ್ರೀಯುತ ಕೆ ಬಿ ಭಾಸ್ಕರ್ ಅವರು ರಾಣಿ ಮಲ್ಲಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಮನವಿ ಸ್ವೀಕರಿಸಿ ಪ್ರಾಧಿಕಾರ ಬೇಡಿಕೆ ವಿಷಯವನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಕಾನೂನು ಸಲಹೆಗಾರರಾದ ಶ್ರೀಯುತ ಹಜರತ್ಅಲಿ ಗೊರವನಹಳ್ಳ ಬೆಳವಡಿ ಮಲ್ಲಮ್ಮಳ ಪ್ರಾಧಿಕಾರ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರಯ್ಯ ಕಾರಿಮನಿ ಹೋರಾಟ ಸಮಿತಿ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಬಿ ಜಿ ದೇಗಾವಿ ಹಾಜರಿದ್ದರು ಸಾಮಾಜಿಕ ಕಾರ್ಯಕರ್ತ ಪ್ರಾಧಿಕಾರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹುಂಬಿ ಮಾತನಾಡಿ ಸನ್ಮಾನ್ಯ ಮುಖ್ಯಮಂತ್ರಿಗಳ ಮನವೊಲಿಸಿ, ಆದಷ್ಟು ಬೇಗನೆ ಪ್ರಾಧಿಕಾರ ಘೋಷಣೆ ಮಾಡುವಂತೆ ಶ್ರೀಯುತರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಚಯ್ಯ ಸ್ವಾಮಿಗಳು ರೊಟ್ಟೆಯ್ಯನವರ ವಿಠಲ ಫಿಶೇ ಪ್ರಕಾಶ್ ಕಾರಿಮನಿ ಸುನಿಲ್ ವರ್ಣೇಕರ್ ಮಹಾಂತೇಶ್ ಕರಿಕಟ್ಟಿ ಶ್ರೀ ರಾಜು ಬರಮಗೌಡ್ರ್ ರಂಜಾನ್ ನದಾಫ್ ರೋಹಿತ್ ಕುಲಕರ್ಣಿ ಹನುಮಂತ್ ಕಕ್ಕೈನವರ್ ಆನಂದ್ ದೇಗಾವಿ ಗಂಗಪ್ಪ ರೇಷ್ಮೆ ಸಯ್ಯದ್ ದಿಲುನಾಯ್ಕ್ ಹಾಜರಿದ್ದರು.
ವರದಿ: ದುಂಡಪ್ಪ ಹೂಲಿ




