ಮಲ್ಲಮ್ಮನ ಬೆಳವಡಿ: ವೀರರಾಣಿ ಬೆಳವಡಿ ಮಲ್ಲಮ್ಮ 366 ನೆಯ ಜಯಂತೋತ್ಸವವು ಮಲ್ಲಮ್ಮನ ಬೆಳವಡಿಯಲ್ಲಿ ಅದ್ದೂರಿಯಾಗಿ ಜರುಗಿತು ಗ್ರಾಮದ ಮನೆಗಳ ಮುಂದೆ ರಂಗವಲ್ಲಿ ಹಾಕಿ ರಾಣಿ ಮಲ್ಲಮ್ಮಳ ಭಾವಚಿತ್ರವಿರುವ ವಾಹನವನ್ನು ಭಕ್ತಿಯಿಂದ ನೀರು ಹಾಕಿ ಬರಮಾಡಿಕೊಂಡರು ಮಲ್ಲಮ್ಮಳ ಅಭಿಮಾನಿಗಳು ತಮ್ಮ ತಮ್ಮ ಮನೆ ಮುಂಭಾಗದಲ್ಲಿ ರಾಣಿ ಮಲ್ಲಮ್ಮಾಜಿಯ ಫೋಟೋವನ್ನು ಇಟ್ಟು ಪೂಜೆ ಮಾಡಿ ಸಿಹಿ ಹಂಚಿದರು.
ರಾಣಿ ಮಲ್ಲಮ್ಮ ಮೂರ್ತಿಯನ್ನು ಮಾಜಿ ಶಾಸಕ ವಿ ಐ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಮ ಮ ಕಾಡೇಶನವರ ಮಾಜಿ ಜಿ ಪಂ ಸದಸ್ಯ ವೀರಣ್ಣ ಕರಿಕಟ್ಟಿ ರಾಚಯ್ಯ ರೊಟ್ಟಯ್ಯನವರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ಸಂಚರಿಸುವ ರಾಣಿ ಮಲ್ಲಮ್ಮಳ ಭಾವಚಿತ್ರ ಇರುವ ವಾಹನದ ಪೂಜೆಯನ್ನು ಬಸಯ್ಯಸ್ವಾಮಿಗಳು ವಿರಕ್ತಮಠ ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಹುಂಬಿ ಬೆಳವಡಿಯ ಪ್ರಾಧಿಕಾರ ಬೇಗನೆ ಸರ್ಕಾರ ಘೋಷಣೆ ಮಾಡಬೇಕು ಒಂದು ವೇಳೆ ಘೋಷಣೆಯಾಗದಿದ್ದರೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದೆಂದು ಹೇಳಿದರು.
ಹಿರಿಯರಾದ ರಾಚಪ್ಪ ಮಟ್ಟಿ ವಕೀಲರಾದ ಸಿ ಎಸ್ ಚಿಕ್ಕನಗೌಡರ್ ಪ್ರಕಾಶ್ ಕಾರಿಮನಿ ಎಸ್ ಎಂ ಕರಿಕಟ್ಟಿ ಡಾ ಡಿ ವೈ ಗರಗದ ವಿಠಲ ಫಿಶೇ ಎಂ ಪಿ ಉಪ್ಪಿನ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮಲ್ಲಮ್ಮ ಅಭಿಮಾನಿ ತಾಯಂದಿರು ಪ್ರತಿಷ್ಠಾನದ ಮಹಿಳಾ ಸವಿತಾ ಪಾಟೀಲ್ ಕಿತ್ತೂರು ಕರ್ನಾಟಕ ವೇದಿಕೆಯ ಬಸವರಾಜ್ ಗುಡ್ಡದಮಠ ವಕೀಲರಾದ ವಿಶ್ವನಾಥ ಪೂಜಾರ ಮಹಾಂತೇಶ್ ಎಸ್ ಕರಿಕಟ್ಟಿ ರಂಜಾನ್ ನದಾಫ್ ಪ್ರದೀಪ್ ಬಿಸಿರೋಳ್ಳಿ ಉಮೇಶ್ ಸಿದ್ದಣ್ಣವರ ಮಹಾಂತೇಶ್ ಕರವಿನಕೊಪ್ಪ ಸಮೀರ್ ದೊಡ್ಡಮನಿ ರಾಯನಗೌಡ ಪಾಟೀಲ್ ಎಲ್ಲಪ್ಪ ಸಿದ್ದಣ್ಣವರ್ ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ




