ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದ್ದು ಸದ್ರಿ ಪ್ರವಾಸಕ್ಕೆ ತಾಲೂಕಿನ ಕೃಷಿ ಮೇಲ್ವಿಚಾರಕ ವೀರೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆಯು ರೈತರ ಸಂಘಟನೆ ಮಾಡುವುದರ ಮೂಲಕ ಅವರಿಗೆ ಅಗತ್ಯ ಮಾಹಿತಿ ಮತ್ತು ತರಬೇತಿಯನ್ನು ನೀಡುವುದು ಹಾಗೂ ಹೊಸ ಅವಿಸ್ಕಾರಗಳನ್ನು ರೈತರಿಂದಲೇ ಮಾಡಿಸುತ್ತ ಬರುತ್ತಿದೆ.

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿರಿಧಾನ್ಯ ಬೇಸಾಯ, ಯಂತ್ರಶ್ರೀ, ಕಬ್ಬಿನ ಸುಸ್ಥಿರ ಬೇಸಾಯ, ಹೈನುಗಾರಿಕೆ ಹೀಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ರೈತರಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಈ ದಿನ ಕರೂರು ಮತ್ತು ಸಿರಿಗೇರಿ ಗ್ರಾಮದ ರೈತರಿಗೆ ಒಂದು ದಿನದ ಕೃಷಿ ಅಧ್ಯಯನ ಪ್ರವಾಸವನ್ನು ಮೊಣಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಗ್ರಾಮಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ವಲಯದ ಮೇಲ್ವಿಚಾರಕರಾದ ಹನಮಪ್ಪ, ಶಿವಪ್ಪ ಪೂಜಾರ ಸೇವಾಪ್ರತಿನಿಧಿಗಳಾದ ಅನ್ನಪೂರ್ಣ, ಲಕ್ಷ್ಮೀ, ಪಾರ್ವತಿ, ನಿಂಗನಗೌಡ ಹಾಗೂ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ನಾಯ್ಕ




