ಮೊಳಕಾಲ್ಮೂರು : ಮಾನವ ಕುಲದ ಉಳಿವಿಗಾಗಿ ಮತ್ತು ಮುಂದಿನ ಪೀಳಿಗೆಯ ಆರೋಗ್ಯವಂತ ಜೀವನಕ್ಕೆ ಪ್ರತಿಯೊಬ್ಬರೂ ವಾಹನದಿಂದ ಹೊರ ಸೂಸುವ ವಿಷ ಅನಿಲಗಳನ್ನು ತಡೆಯಬೇಕು ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಹಾಂತೇಶ್ ರವರು ತಿಳಿಸಿದರು ಮಾಂತೇಶ್ ರವರು ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಚಿತ್ರದುರ್ಗ ಮತ್ತು ಮೊಣಕಾಲ್ಮೂರು ಪೊಲೀಸ್ ಇವರ ಸಹಯೋಗದಲ್ಲಿ ವಾಯು ಮಾಲಿನ್ಯ ಮಾಸಾಚರಣೆ ನಡೆಯಿತು, ಇದರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ .ನವಂಬರ್ ತಿಂಗಳನ್ನು ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯನ್ನಾಗಿ ಹಮ್ಮಿಕೊಳ್ಳಲಾಗಿದ್ದು, ರಸ್ತೆ ಸುರಕ್ಷತೆ ಸಪ್ತಾಹ ಎಂದು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರಕೃತಿಯಲ್ಲಿರುವ ಆಕ್ಸಿಜನ್ ಜೊತೆಗೆ ನಮ್ಮ ವಾಹನಗಳಿಂದ ವರ ಸೂಸುವ ಹೊಗೆ ಮಾಲಿನ್ಯದಲ್ಲಿ ಸೇರಿಕೊಂಡು ಮನುಷ್ಯರು ಉಸಿರಾಡಿದಾಗ ನಮ್ಮ ದೇಹಕ್ಕೆ ಸೇರಿಕೊಳ್ಳುತ್ತದೆ ಆದ್ದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡಬಹುದು. ಬಿಸಿಲಿನಿಂದ ಮನುಷ್ಯರಿಗೆ ಅನೇಕ ಚರ್ಮದ ಕಾಯಿಲೆಗಳು ಕೂಡ ಬರಬಹುದು. ಆದ್ದರಿಂದ ಎಲ್ಲರೂ ಜಾಗೃತರಾಗಬೇಕು ಎಂದರು. ಅದೇ ರೀತಿ ರಸ್ತೆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು, ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಪಿಐ ನಾಗರಾಜ್ ಮಾತನಾಡಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಉಲ್ಲೇಖನೆ ಮತ್ತು ದಂಡನೆ ಬಗ್ಗೆ ವಿವರವಾಗಿ ತಿಳಿಸಿದರು ಉದಾಹರಣೆ ಎಂಬಂತೆ ಮಧ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಅಪ್ರಾಪ್ತ ವಯಸ್ಕರಿಗೆ ಚಾಲನೆಗೆ ನಿಷಿದ್ಧ, ಸರಕು ಸಾಗಣೆ ವಾಹನದಲ್ಲಿ ಪ್ರಯಾ ಪ್ರಯಾಣಿಕರನ್ನು ಸಾಗಣೆ ಮಾಡಬಾರದು ಮಿತಿಗಿಂತ ಹೆಚ್ಚು ಪ್ರಯಾಣಿಕರ ಸಾಗಣೆ ಮಾಡಬಾರದು, ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು ಮೊಬೈಲ್ ನಲ್ಲಿ ಮಾತನಾಡುವ ಹಾಗಿಲ್ಲ, ಅತಿ ಮುಖ್ಯವಾಗಿ ಬೈಕ್ ಸವಾರರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದರು ಇನ್ನು ಅನೇಕ ರಸ್ತೆ ನಿಯಮಗಳನ್ನು ಚಾಲಕರು ಮತ್ತು ಆಟೋಚಾಲಕರು ಗಮನಹರಿಸಬೇಕು ಎಂದರು
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ ಹೊಸಪೇಟೆ, ಪೊಲೀಸ್ ಸಿಬ್ಬಂದಿ ಆಟೋ ಚಾಲಕರು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




