ಕಂಪ್ಲಿ : ನಗರದ ಗಲ್ಲಿ ಗಲ್ಲಿಗಳಲ್ಲಿ, ಪ್ರಮುಖ ವೃತ್ತಗಳು ಸೇರಿದಂತೆ ಪ್ರಮುಖ ವ್ಯಾಪಾರದ ಮಾರುಕಟ್ಟೆಯಲ್ಲಿ ನೇರಳೆಹಣ್ಣಿನದ್ದೇಕಾರುಬಾರು! ಹೌದು, ನೇರಳೆ ಹಣ್ಣನ್ನು ಕಂಡರೆ ನಗರದ ಜನರು ಮೂಗು ಮುರಿಯುತ್ತಿದ್ದ ಕಾಲವಿತ್ತು. ನೇರಳೆ ಹಣ್ಣಿನಲ್ಲೂ ಅಪರೂಪದ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷಧೀಯ ಗುಣಗಳಿವೆ ಎಂಬ ವಿಷಯ ತಿಳಿದ ಕೂಡಲೆ, ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಜೂನ್ ಹಾಗೂ ಜುಲೈನಲ್ಲಿ ಮಾತ್ರ ಲಭ್ಯವಿರುವ ಕಾರಣ ಹೆಚ್ಚು ಖರೀದಿಸುತ್ತಿದ್ದಾರೆ.
ನಗರದ ಗಲ್ಲಿ ಗಲ್ಲಿಗಳಲ್ಲಿ, ಸಣ್ಣ ಹಣ್ಣಿನಂಗಡಿಯಿ0ದಿಡಿದು ದೊಡ್ಡ ಹಣ್ಣಿನ ಮಳಿಗೆಗಳಲ್ಲೂ ನೇರಳೆ ಹಣ್ಣು ಮಾರಾಟವಾಗುತ್ತಿದೆ ಎಂದು ಹಣ್ಣಿನ ವ್ಯಾಪಾರಿ ಸೋಮಶೇಖರ ತಿಳಿಸಿದ್ದಾರೆ.




