ಮೊಳಕಾಲ್ಮುರು: ನಾಗಸಮುದ್ರ ಗ್ರಾಮದ ಭೋವಿ ಜನಾಂಗದ ಆರಾದ್ಯ ದೈವ ಶ್ರೀ ತಿರುಮಲ ತಿರುಪತಿ ತಿಮ್ಮಪ್ಪಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ದಿನಾಂಕ 12-12-2025 ರಿಂದ 14-12-2025ರವರೆಗೆ ಬಹಳ ವಿಜೃಂಭಣೆಯಿಂದ ನಡೆಸಲಾಗಿದೆ. ಊರಿನ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪದಿಂದ ಅಲಂಕಾರಿಸಲಾಗಿತ್ತು.
ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದದ್ದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನೂತನವಾಗಿ ನಿರ್ಮಾಣವಾಗಿದೆ. ವೆಂಕಟೇಶ್ವರ ಸ್ವಾಮಿ ಮೂರ್ತಿಯನ್ನು ತಿರುಮಲ ತಿರುಪತಿಯಿಂದ ಸುಮಾರು ನಾಲ್ಕು ಆಡಿ ಎತ್ತರದ ಮೂರ್ತಿಯನ್ನು ತಿರುಪತಿಯ ದೇವಸ್ಥಾನ ಸಮಿತಿಯಿಂದ ತರಿಸಲಾಗಿದೆ.

ಶುಕ್ರವಾರದಂದು ತಿಮ್ಮಪ್ಪ ಸ್ವಾಮಿಗೆ ಚಿನ್ನಹಗರಿ ಹಳ್ಳದಲ್ಲಿ ಗಂಗೆ ಸ್ಥಾನ ಮಾಡಿಸಿ ಊರುಮೆ ತಮಟೆಯೊಂದಿಗೆ ದೇವಸ್ಥಾನಕ್ಕೆ ಕರೆ ತರಲಾಯಿತು.13-12-2025ನೇ ಶನಿವಾರದಂದು ಧಾರ್ಮಿಕ ವಿದಿವಿಧಾನದಲ್ಲಿ ಬ್ರಾಹ್ಮಣ ಪೂಜ್ಯರಿಂದ ಮಂತ್ರ ವೇದ ಘೋಷಣೆಯಲ್ಲಿ ಗುರು ಶಾಂತಿ, ಪೂರ್ವಕ ಪಂಚ ಗವ್ಯ ಅಭಿಷೇಕ, ಸಾಮೂಹಿಕ ಪುಣ್ಯ ಹವಾಚನ, ನಾಂದಿ ಸ್ಥಾಪನ .ಸಕಲ ತೀರ್ಥದೇವತಾ ಕಳಶ, ನವಗ್ರಹ ಕಳಶ, ವಾಸ್ತು ವರುಣ ಕಳಶ, ಹೋಮ ಪೂರ್ಣಹುತಿ ಮಂಗಳಾರತಿಯಿಂದ ಬೆಳ್ಳಿಗ್ಗೆ 7:ಗಂಟೆಗೆ ಗುಡಿ ತುಂಬುವ ಕಾರ್ಯಕ್ರಮ ನೆರಸಲಾಗುತ್ತದೆ.
14- 12-2025ನೇ ಬೆಳ್ಳಿಗ್ಗೆ 9-10ರಿಂದ ಪ್ರತಿಷ್ಠಾಪನೆ ಮತ್ತು ಪ್ರತಿಷ್ಟಾ0ಗ ಹೋಮ, ಶ್ರೀ ಗರುಡ ದೇವರ ಹೋಮ, ಹಾಗೂ ಗರುಡ ಸ್ಥ0ಬಾ ಸ್ಥಾಪನೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ಮೂಲ ಮಂತ್ರ ಹೋಮ ವಿಗ್ರಹ ಸ್ಥಾಪನೆ, ಅಭಿಷೇಕ, ಪ್ರಾಣ ಪ್ರತಿಷ್ಠಾನೆ ಮೂರ್ತಿ ಅಲಂಕಾರ, ನೈವೇದ್ಯದೊಂದಿಗೆ ಮಹಾ ಮಂಗಳಾರತಿಯಿಂದ ಕಾರ್ಯಕ್ರಮ ಕೊನೆಗೊಳ್ಳುತ್ತದೆ. ಭಾನುವಾರದಂದು ಅನ್ನ ಸಂತಪ್ರಣೆ ಕಾರ್ಯಕ್ರಮ ನೆರವೇರಿಸಲಾಗಿದೆ. ನಾಗಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ದೇವರ ದರ್ಶನ ಪಡೆದುಕೊಂಡು ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ನಾಗಸಮುದ್ರ ಗ್ರಾಮದ ಗುಂಜೆವಾರು ಗುಡಿಕಟ್ಟೆ, ಸಾವಿರ ಮನೆ ಗುಡಿ ಕಟ್ಟೆ ಅನಂತಪುರ ಗುಡಿಕಟ್ಟೆ, ಭೈರಾಪುರ ಗುಡಿಕಟ್ಟೆ, ಮುದ್ದುಗಳೂರು ಗುಡಿಕಟ್ಟೆ ಪಲ್ಲಪುರು ಗುಡಿಕಟ್ಟೆ ಹಾಗೂ ಉರ್ತಳ್ ಗುಡಿ ಕಟ್ಟಕ್ಕೆ ಸೇರಿದ ಯಜಮಾನರು ಹಾಗೂ ಅಣ್ಣತಮ್ಮಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಪಿಎಂ ಗಂಗಾಧರ




