Ad imageAd image

ಹಿರಿಯ ಹಾಸ್ಯನಟ ಉಮೇಶ‍್ ಇನ್ನಿಲ್ಲ

Bharath Vaibhav
ಹಿರಿಯ ಹಾಸ್ಯನಟ ಉಮೇಶ‍್ ಇನ್ನಿಲ್ಲ
WhatsApp Group Join Now
Telegram Group Join Now

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಹಿರಯ ನಟ ಉಮೇಶ‍್ ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಉಮೇಶ್ ಅವರನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

ಆರು ದಶಕಗಳ ಕಾಲ ವೃತ್ತಿಜೀವನವನ್ನು ಹೊಂದಿರುವ ಕನ್ನಡ ಸಿನಿಮಾ ನಟರಾಗಿದ್ದಾರೆ. ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಉಮೇಶ್ ತಮ್ಮ ವಿಶಿಷ್ಟ ಸಂಭಾಷಣೆ, ಮುಖಭಾವ ಮತ್ತು ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ.

1990 ರಲ್ಲಿ ಬಿಡುಗಡೆಯಾದ ಅನಂತ್ ನಾಗ್ ನಟಿಸಿದ ಗೋಲ್ಮಾಲ್ ರಾಧಾಕೃಷ್ಣ ಹಾಸ್ಯ ಚಿತ್ರದಲ್ಲಿ ಉಮೇಶ್ ಅವರ “ಸೀತಾಪತಿ” ಪಾತ್ರವು ಕನ್ನಡ ಚಿತ್ರರಂಗದ ಅತ್ಯುತ್ತಮ ಹಾಸ್ಯ ಪಾತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವರ “ಅಪಾರ್ಥ ಮಾಡ್ಕೊಂಡ್ಬಿಟ್ರೋ ಎನೋ” ಡೈಲಾಗ್ ಜನಸಾಮಾನ್ಯರಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!