Ad imageAd image

ಕನ್ನಡದ ಹಿರಿಯ ನಟ ಟಿ. ತಿಮ್ಮಯ್ಯ ಇನ್ನಿಲ್ಲ 

Bharath Vaibhav
ಕನ್ನಡದ ಹಿರಿಯ ನಟ ಟಿ. ತಿಮ್ಮಯ್ಯ ಇನ್ನಿಲ್ಲ 
WhatsApp Group Join Now
Telegram Group Join Now

ಬೆಂಗಳೂರು: ಡಾ ರಾಜ್‌ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಅವರಂತಹ ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ್ದ ಕನ್ನಡದ ಹಿರಿಯ ನಟ ಟಿ ತಿಮ್ಮಯ್ಯ ಶನಿವಾರ ನಿಧನರಾಗಿದ್ದಾರೆ.

ತಿಮ್ಮಯ್ಯ ಅವರಿಗೆ 92 ವರ್ಷ ವಯಸ್ಸಾಗಿದ್ದು, ಶನಿವಾರ ನಸುಕಿನ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅವರು ತಮ್ಮ ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ತಿಮ್ಮಯ್ಯ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಬನಶಂಕರಿಯ ಸ್ಮಶಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ತಿಮ್ಮಯ್ಯ ಅವರು ಪ್ರಸಿದ್ಧ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಿಂಗೀತಂ ಶ್ರೀನಿವಾಸ ರಾವ್ ಕೆವಿ ಜಯರಾಂ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ.

ಅವರು ಚಲಿಸುವ ಮೋಡಗಳು, ಬಂಧನ, ಕಾಮನಬಿಲ್ಲು, ಪರಮೇಶಿ ಪ್ರೇಮಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ, ಕರ್ಣ, ಕುರುಕ್ಷೇತ್ರ, ನಿಷ್ಕರ್ಷ ಮತ್ತು ಬೆಳದಿಂಗಳ ಬಾಲೆ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!