ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಿಳ್ಳಿಯ ಗ್ರಾಮದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ವಚನ ಶ್ರಾವಣದ ಕಾರ್ಯಕ್ರಮದಲ್ಲಿ 88ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರ್ಯನಿರತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಾ oಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೈ ಬೀ ದಾಸನಕೊಪ್ಪ ಮಾತನಾಡಿ ಯುವ ಜನತೆ ದೇಶ ಪ್ರೇಮದ ಜೊತೆಗೆ ನಾಡು ನುಡಿಯನ್ನು ಸದಾ ಮೈಗೂಡಿಸಿಕೊಂಡು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಚಿಂತನೆ ನಡೆಸಿ ಎಂದು ತಿಳಿಸಿದರು.ಗ್ರಾಮ ಪಂಚಾಯತಿಯ ಅಧ್ಯಕ್ಷ ವಿನಾಯಕ ಧನಿಗೊಂಡ ಉಪಾಧ್ಯಕ್ಷೆ ಗಂಗಮ್ಮ ಅಶೋಕ ಮಾದಿ ಸಹಕಾರಿ ಸಂಘಗಳ ಅಧ್ಯಕ್ಷರಾದ ದ್ಯಾಮಣ್ಣ ಬಡಿಗೇರ ಅನುಭವ ಮಂಟಪದ ಅಧ್ಯಕ್ಷ ಗುರುಲಿಂಗ ಉಣಕಲ್, ಡಾ ರಾಜ್ ಕುಮಾರ್ ಕನ್ನಡ ಸಾ oಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿರಾಜ ಬಡಿಗೇರ, ರಾಮಣ್ಣ ಕೋಟಿ, ನೀಲಪ್ಪ ಮುತ್ತಗಿ, ಅಪ್ಪಣ್ಣ ಜಮ್ಮಿಹಾಳ,ನೀಲಪ್ಪ ಹಿರೇಗುಂಜುಳ,ಶಿವಲಿಂಗಪ್ಪ ಕೆಳಗಿನಮನಿ,ಬಸವರಾಜ ಮಾದಿ, ಅಡಿವೆಪ್ಪ ಉಣಕಲ್, ಬಸಪ್ಪ ಧನಿಗೊಂಡ, ನಿಂಗಪ್ಪ ಮಾಳಮ್ಮನವರ, ಶಶಿ ಕೋಟಿ, ಮಯೂರಗೌಡ ಪಾಟೀಲ, ನಿಂಗಪ್ಪ ಬೆಳ್ಳಿವಾಲಿ, ಪ್ರಭು ರಾಮನಾಳ, ಶಿವಪ್ಪ ಮಾದಿ, ಮಾದೇವಪ್ಪ ಜಮ್ಮಿಹಾಳ, ಅಶೋಕ ಶಿರಕೋಳ, ರಾಜಕುಮಾರ ಕೂಡಲಗಿ,ಗ್ರಾ,ಪಂ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ಎಲ್ಲ ಶರಣ ಬಂಧುಗಳು ಗ್ರಾಮದ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು , ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವರಾಜ್ ಮಲ್ಲಪ್ಪ ಬಮ್ಮಿಗಟ್ಟಿ ಹಾಗೂ ಸಿ ಆರ ಪೀ ಎಫ್ ಕಮಾಂಡೋ ಯೋಧ ಬಸವರಾಜ ವೀರಭದ್ರಪ್ಪ ಧನಿಗೊಂಡ ಇವರಿಗೆ ಸನ್ಮಾನಿಸಲಾಯಿತು ನಂತರ ಹಿರೇಹೊನ್ನಿಹಳ್ಳಿಯ ಸರ್ಕಾರಿ ಪ್ರಾಥಮಿಕ , ಪ್ರೌಢ ಶಾಲೆ ಹಾಗೂ ರಾಣಿ ಚೆನ್ನಮ್ಮ ವಸತಿ ನಿಲಯ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಶರಣರ ಬಳಗದ ವತಿಯಿಂದ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ವಕೀಲರಾದ ಶಿವರುದ್ರಪ್ಪ ಧನಿಗೊಂಡ ನಿರೂಪಿಸಿ. ಬಸವರಾಜ ಕೆಳಗಿನಮನಿ ವಂದಿಸಿದರು, ಸೇರಿದ ಎಲ್ಲರಿಗೂ ಮಹಾದಾಸೋಹ ಜರುಗಿತು.
ವರದಿ ನಿತೀಶಗೌಡ ತಡಸ ಪಾಟೀಲ್