Ad imageAd image

ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡುವಾಗ ಮಿಸ್‌ಫೈರ್ ಆಗಿ ವ್ಯಕ್ತಿ ಸಾವು : ವಿಡಿಯೋ ವೈರಲ್

Bharath Vaibhav
ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡುವಾಗ ಮಿಸ್‌ಫೈರ್ ಆಗಿ ವ್ಯಕ್ತಿ ಸಾವು : ವಿಡಿಯೋ ವೈರಲ್
WhatsApp Group Join Now
Telegram Group Join Now

ನವದೆಹಲಿ : ಇತ್ತೀಚೆಗೆ ಇಬ್ಬರು ಯುವಕರು ರಸ್ತೆ ಬದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದರು ಈ ವೇಳೆ ನಿದ್ದೆ ಒಬ್ಬರಿನಲ್ಲಿ ಇದ್ದ ಲಾರಿ ಚಾಲಕನೊಬ್ಬ ಯುವಕನೊಬ್ಬನಿಗೆ ಬುದ್ಧಿದ ಪರಿಣಾಮ ಸ್ಥಳದಲ್ಲಿ ಯುವಕನುಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು.

ಇದೀಗ ಮತ್ತೊಂದು ಅಂಥದೇ ಘಟನೆ ನಡೆದಿದ್ದು, ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡುವಾಗ ಮಿಸ್‌ಫೈರ್ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

https://x.com/nextminutenews7/status/2033767774124970143?ref_src=twsrc%5Etfw%7Ctwcamp%5Etweetembed%7Ctwterm%5E2033767774124970143%7Ctwgr%5Eb3dd8a0365a610d209cdd6d7da76a36717be1f8c%7Ctwcon%5Es1_c10&ref_url=https%3A%2F%2Fapi-news.dailyhunt.in%2F

ದೆಹಲಿಯ ಯುವಕನೊಬ್ಬ ರಿವಾಲ್ವರ್ ಹಿಡಿದು ರೀಲ್ಸ್ ಮಾಡಲು ಹೊರಟಿದ್ದಾನೆ. ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿದ್ದಾನೆ.

ಬಳಿಕ ಲೋಡೆಡ್ ರಿವಾಲ್ವರ್ ಎದೆಗೆ ಇಟ್ಟು ಯಾವುದೇ ಭಯವಿಲ್ಲದಂತೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ರಿವಾಲ್ವರ್ ಟ್ರಿಗರ್‌ ಅಚಾನಕ್ಕಾಗಿ ಒತ್ತಿದ್ದಾರೆ. ಗುಂಡು ಎದೆ ಸೀಳಿ ಮರುಕ್ಷಣದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಎದೆಗೆ ರಿವಾಲ್ವರ್ ಇಟ್ಟ ಬೆನ್ನಲ್ಲೇ ವಿಡಿಯೋ ಶೂಟ್ ಮಾಡುತ್ತಿದ್ದ ಗಳೆಯ ತಕ್ಷಣವೇ ಎಚ್ಚರಿಕೆ ಕೊಟ್ಟಿದ್ದಾನೆ. ಸಹೋದರು ಗುಂಡು ಹಾರಿಸಬೇಡ ಎಂದು ಭಯದಿಂದಲೇ ಹೇಳಿದ್ದಾನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಪವನ್, ಅರೆ ಇಲ್ಲಪ್ಪ ಎಂದು ಉತ್ತರಿಸಿದ್ದಾನೆ.

ಈ ಉತ್ತರ ಮುಗಿಯುವಷ್ಟರಲ್ಲೇ ಟ್ರಿಗರ್ ಪ್ರೆಸ್ ಆಗಿ ಗುಂಡು ಎದೆಯನ್ನು ಸೀಳಿ ಹೋಗಿದೆ. ಮರುಕ್ಷಣದಲ್ಲೇ ನೆಲಕ್ಕುರುಳಿದ್ದಾನೆ. ಈ ಎಲ್ಲಾ ಘಟನೆ ವಿಡಿಯೋ ದಾಖಲಾಗಿದೆ. ಪವನ್ ಗೆಳೆಯನೇ ಈ ವಿಡಿಯೋ ಸೆರೆ ಹಿಡಿದಿದ್ದಾನೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!