Ad imageAd image

ಗೆಳತಿಯರೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ವಿಡಿಯೋ ವೈರಲ್ : ಯುವಕ ಆತ್ಮಹತ್ಯೆ

Bharath Vaibhav
ಗೆಳತಿಯರೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ವಿಡಿಯೋ ವೈರಲ್ : ಯುವಕ ಆತ್ಮಹತ್ಯೆ
WhatsApp Group Join Now
Telegram Group Join Now

ಹಾಸನ: ಗೆಳತಿಯರೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ವಿಡಿಯೋ ಇನ್ ಸ್ಟಾಗ್ರಾಅಂ ನಲ್ಲಿ ವೈರಲ್ ಆಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಕಲ್ಲೇನಹಳ್ಳಿಯಲ್ಲಿ ನಡೆದಿದೆ.

ಪವನ್ ಕೆ (21) ಆತ್ಮಹತ್ಯೆಗೆ ಶರಣಗೈರುವ ಯುವಕ. ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿ.ಪವನ್ ಕೆಲ ದಿನಗಳ ಹಿಂದೆ ಹಾಸನದ ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ಮಾತನಾಡುತ್ತ ಕುಳಿತಿದ್ದ. ಈ ದುಶ್ಯವನ್ನು ಅಪರಿಚಿತ ಯುವತಿಯೊಬ್ಬಳು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿದ್ದಳು.

ವ್ಯಂಗ್ಯ ಸಂಭಾಷಣೆಯೊಂದಿಗೆ ವಿಡಿಯೋ ಅಪ್ ಲೋಡ್ ಆಗಿತ್ತು. ಇದನ್ನು ಪವನ್ ಸಹಪಾಠಿಗಳು ಸೇರಿದಂತೆ ಹಲವರು ನೋಡಿದ್ದರು.

ಇನ್ ಸ್ಟಾಗ್ರಾಅಂ ನಲ್ಲಿ ಅಪ್ ಲೋಡ್ ಆಗಿದ್ದ ವಿಡಿಯೋ ಡಿಲಿಟ್ ಮಾಡಿಸಲು ಪವನ್ ಸಾಕಷ್ಟು ಯತ್ನಿಸಿದ್ದ. ಆದರೆ ಸಾಧ್ಯವಾಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಪವನ್ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪವನ್ ಆತ್ಮಹತ್ಯೆಗೆ ಕಾರಣಳಾದ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವತಿಯನ್ನು ಬಂಧಿಸುವಂತೆ ಕುಟುಂಬದವರು ಆಗ್ರಹಿಸಿದ್ದಾರೆ. ಗೇರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!