ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಮೆಟ್ರೋ ತನ್ನ ಜನಸ್ನೇಹಿ ಸೇವೆಗೆ ತುಂಬಾನೇ ಹೆಸರುವಾಸಿಯಾಗಿದೆ. ಈ ಹಿನ್ನೆಲೆ ನಗರದ ಬಹುತೇಕರು ಮೆಟ್ರೋ ಪ್ರಯಾಣದ ಮೇಲೆ ಅವಲಂಬಿತರಾಗಿದ್ದಾರೆ.
ಆದರೆ ಇಂತಹ ಮೆಟ್ರೋದಲ್ಲಿ ಆಗಾಗ ವಿಡಿಯೋ ಸುದ್ದಿಯಾಗುತ್ತಲೇ ಇರುತ್ತದೆ.ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ನಮ್ಮ ಮೆಟ್ರೋಗೆ ದೇಶದಲ್ಲಿ ಉತ್ತಮ ಹೆಸರನ್ನು ಪಡೆದಿದೆ ಆದರೆ ಇತ್ತೀಚೆಗೆ ರೈಲಿನಲ್ಲಿ ರೀಲ್ಸ್ ಮಾಡೋದು, ಫೈಟಿಂಗ್, ಗಲಾಟೆಯ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಆದರೆ ಇದೀಗ ನಗರದ ಹೃದಯಭಾಗ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ರೋಮಾನ್ಸ್ ಮಾಡುತ್ತಿರುವ ದೃಶ್ಯ ಸಖತ್ ವೈರಲ್ ಆಗಿದೆ.
ಸದಾ ಜನಜಂಗುಳಿಯಿಂದ ತುಂಬಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅಕ್ಕ- ಪಕ್ಕದಲ್ಲಿ ಜನ ಇದ್ದರೂ ಕೂಡ ಕ್ಯಾರೇ ಎನ್ನದೆ ಜೋಡಿಗಳು ರೊಮ್ಯಾನ್ಸ್ ಮಾಡಿದ್ದು, ನೋಡನೋಡುತ್ತಲೇ ಯುವತಿಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದಾನೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಯುವ ಜೋಡಿಯ ಲಜ್ಜೆಗೆಟ್ಟ ವರ್ತನೆಯ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಸಂಬಂಧಗಳು ವೈಯಕ್ತಿಕ ವಿಷಯವಾಗಿದ್ದರೂ, ವಾತ್ಸಲ್ಯ ಮತ್ತು ಸಾರ್ವಜನಿಕ ಅಸಭ್ಯತೆಯ ನಡುವೆ ಸ್ಪಷ್ಟವಾದ ಗೆರೆ ಇದೆ – ಮತ್ತು ಸಾರ್ವಜನಿಕ ಸಾರಿಗೆಗಾಗಿ ಉದ್ದೇಶಿಸಲಾದ ಜಾಗದಲ್ಲಿ ಆ ಗೆರೆಯನ್ನು ಎಂದಿಗೂ ದಾಟಬಾರದು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.