Ad imageAd image

ವಿದ್ಯಾಶ್ರೀ ಬಿರಾದರ ಸಾಧನೆಗೆ ಮೆಚ್ಚುಗೆ, ಸನ್ಮಾನ

Bharath Vaibhav
ವಿದ್ಯಾಶ್ರೀ ಬಿರಾದರ ಸಾಧನೆಗೆ ಮೆಚ್ಚುಗೆ, ಸನ್ಮಾನ
WhatsApp Group Join Now
Telegram Group Join Now

————————————–ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ಮಾಡಿದ್ದ ವಿದ್ಯಾರ್ಥಿನಿ

ಹಲ್ಯಾಳ: ‘ನಾನು ವಿಜ್ಞಾನಿ 2025’ರ ಕಾರ್ಯಾಗಾರ’ ದಲ್ಲಿ ಅಥಣಿ ತಾಲ್ಲೂಕಿನ ಬಸವೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ಮಾಡಿರುವುದು ಪ್ರಶಂಸನೀಯ ಎಂದು ಸಂಸ್ಥೆಯ ಅಧ್ಯಕ್ಷರು ಆರ್ ಎಂ ಪಾಟೀಲ ಹೇಳಿದರು.

ತದನಂತರ ಸಂಗಮೇಶ ಹಚ್ಚಡದ (ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಳಗಾವಿ) ಕಾರ್ಯಕ್ರಮ ದಲ್ಲಿ ಮಾತನಾಡಿ, ಕರ್ನಾಟಕ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಇಸ್ರೋ ಭಾರತ ಸರ್ಕಾರ ಇವರು ದೊಡ್ಡಬಳ್ಳಾಪುರದಲ್ಲಿ ನಡೆದ 9 ದಿನಗಳ ಕಾಲ ‘ನಾನು ವಿಜ್ಞಾನಿ 2025’ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಒಂಭತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ನಮ್ಮ ಅಥಣಿ ತಾಲ್ಲೂಕಿನ ಬಸವೇಶ್ವರ ಶಾಲೆಯ ವಿದ್ಯಾರ್ಥಿ ವಿದ್ಯಾಶ್ರೀ ಬಿರಾದರ ಭಾರತ ಶ್ರೇಷ್ಟ ವಿಜ್ಞಾನಿ ಡಾ. ಎ.ಎಸ್.ಕಿರಣ್ ಕುಮಾರ್ ಮತ್ತು 30 ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಟೆಲಿಸ್ಕೋಪ್ ತಯಾರಿಸಿ ವಿಶ್ವ ದಾಖಲೆ ಬರೆದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಸಾಧನೆ ನಮ್ಮ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು. ಮತ್ತು ಅಥಣಿ ತಾಲ್ಲೂಕಿನ ವಿದ್ಯಾರ್ಥಿ ಜೊತೆ ರಾಜ್ಯದ ಮತ್ತಿತರ ಜಿಲ್ಲೆಗಳ 160 ವಿದ್ಯಾರ್ಥಿಗಳು ತರಬೇತಿ ಶಿಬಿದರದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ವರ್ಡ್ ಬುಕ್ ಆಫ್ ರೆಕಾರ್ಡ್, ಏಷ್ಯ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿ ಇತಿಹಾಸದಲ್ಲೇ ಪ್ರಥಮವಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆ ಮೆಚ್ಚಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಲ್ಲೋಟ್ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ, ಪದಕ ವಿತರಿಸಿ ಅಭಿನಂದಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಮತ್ತು ಕಳೆದ ಐದು ವರ್ಷದಿಂದ ವಿಜ್ಞಾನ ಮತ್ತು ಮೌಡ್ಯತೆ ವಿರುದ್ಧ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ಮನೋಭಾವವನ್ನು ಹೆಚ್ಚಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ ಮಾಡುತ್ತಾ ಬಂದಿದೆ ಎಂದು ಸಿ ಆರ್ ಪಿ ವಿನಾಯಕ ಸನದಿಯವರು ಬಹಳ ಹೆಮ್ಮೆಯಿಂದ ಹೇಳಿದರು.
ಈ ಸಂತೋಷಕ್ಕೆ ವಿದ್ಯಾರ್ಥಿ ಗೆ ಮತ್ತು ಅವರ ತಂದೆ ತಾಯಿಗಳಿಗೂ ಪುಷ್ಪ ಹಾರಿಸಿ ಅಭಿನಂದನಿಸಿದರು.

ಮಹಾಂತೇಶ ಹಿರೇಮಠ್ ನಿರೂಪಿಸಿದರು. ಆನಂದ್ ಬಿರಾದಾರ್ ಸ್ವಾಗತಿಸಿದರು. ಸಂತೋಷ್ ಸರ್ ವಂದಿಸಿದರು.

ಈ ವೇಳೆ ವಿನಾಯಕ ಸನದಿ (ಸಿ ಆರ್ ಪಿ ಹಲ್ಯಾಳ ), ವಿಠ್ಠಲ ಕಾಂಬಳೆ, ಮುದಕಣ್ಣ ಶೇಗುಣಶಿ,ಕುಮಾರಗೌಡ ಪಾಟೀಲ್, ಮಹಾದೇವ ಜಾಬಗೌಡರ, ಸಿದ್ದಾರೂಡ ಕೆಂಪಿ, ಎಂ ಜಿ ಬಿರಾದರ,ಈಶ್ವರ ಚನ್ನಣ್ಣವರ, ಮುರಿಗೆಪ್ಪಾ ಗುಮಚಿ, ಬಸಗೌಡ ಚನ್ನಣ್ಣವರ,ಎಸ್ ಎಲ್ ಬಾಗಿ,ಪ್ರಭಾವತಿ ಜಾಬಗೌಡರ,ಸುರೇಶ್ ಬಿರಾದರ, ಶೋಭಾ ಬಿರಾದರ ಮತ್ತು ಇತರರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!