ರಾಯಚೂರು : ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮರ್ಚೆಡ್ ಗ್ರಾಮದ ರೈತರ ಹತ್ತಿ ಹೊಲಗಳಿಗೆ ಭೇಟಿ ನೀಡಿ ಹತ್ತಿ ಬೆಳೆಗಳು ಅತಿವೃಷ್ಟಿ ಅನಾವೃಷ್ಟಿ ಮಳೆಯಿಂದಾಗಿ ಹತ್ತಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು.
ಸಂಬಂಧಪಟ್ಟ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ದೀಪ ಕುಲಕರ್ಣಿ. ತಹಶೀಲ್ದಾರರು ಸುರೇಶ್ ವರ್ಮಾ ಮತ್ತು ತೋಟಗಾರಿಕಾ ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ತಂಡದೊಂದಿಗೆ ಶಾಸಕರು ಮಳೆಗೆ ಹಾನಿಯದ ಹತ್ತಿ ಹೊಲಗಳನ್ನು ವೀಕ್ಷಣೆ ಮಾಡಿ.
ಪ್ರತಿಯೊಂದು ರೈತರ ಹೊಲಗಳನ್ನು ಬಿಡದಂತೆ ಅತಿವೃಷ್ಟಿಯಿಂದ ಹಾನಿಯಾಗಿರುವಂತಹ ಹೊಲಗಳನ್ನು ಖುದ್ದಾಗಿ ಪರಿಶೀಲಿಸಿ. ಮತ್ತು ಹಳ್ಳದ ಪಕ್ಕದಲ್ಲಿರುವ ಭೂಮಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುತ್ತವೆ ಮತ್ತು ನೀರು ನಿಂತು ಬೆಳೆಯು ಹಾನಿಯಾಗಿರುತ್ತದೆ.
ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತನ ಹೊಲಗಳನ್ನು ಬಿಡದೆ ಪ್ರತಿಯೊಬ್ಬ ರೈತನ ಹೊಲದ ಬೆಳೆಯನ್ನು ನೋಡಿ ಪ್ರತಿ ಗ್ರಾಮಗಳಲ್ಲಿ ಎಷ್ಟು ಹೆಕ್ಟರ್ ಹತ್ತಿ ಬೆಳೆ ಇರುತ್ತದೆ ಎಷ್ಟು ಹೆಕ್ಟರ್ ಮೆಣಸಿನಕಾಯಿ ಬೆಳೆ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಈಗಾಗಲೇ ಕೇಂದ್ರ ಸರ್ಕಾರ ಏನ್ ಡಿ ಆರ್ ಎಫ್ RMS ಪ್ರಕಾರ 8,500 ಘೋಷಣೆ ಮಾಡಿದ್ದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಈಗಾಗಲೇ ರಾಜ್ಯ ಸರ್ಕಾರದಿಂದ 8500 ಘೋಷಣೆ ಮಾಡಿದ್ದು ಪ್ರತಿ ಹೆಕ್ಟ್ ರಗೆ 17000 ರಂತೆ ಬೆಳೆ ಹಾನಿಯಾಗಿರುವ ಪ್ರತಿ ರೈತರ ಖಾತೆಗೆ ಹಣ ಜಮಾ ಮಾಡುವಂತಹ ಕೆಲಸ ನಾನು ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.
ಅಧಿಕಾರಿಗಳು ಯಾವುದಾದರೂ ರೈತರು ನನ್ನ ಹೊಲ ಸರ್ವೇ ಮಾಡಿಲ್ಲವೆಂದು ನನಗೆ ಬಂದು ಮಾಹಿತಿ ನೀಡಿದರೆ ನಾನು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾವು ಪ್ರತಿಯೊಂದು ಹೊಲವನ್ನು ಖುದ್ದಾಗಿ ಪರಿಶೀಲಿಸಿ ಬೆಳೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ. ದೀಪ ಕುಲಕರ್ಣಿ. ತೋಟಗಾರಿಕಾ ಅಧಿಕಾರಿ ಕಂದಾಯ ಅಧಿಕಾರಿಗಳು. ಗ್ರಾಮ ಲೆಕ್ಕಾಧಿಕಾರಿಗಳು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ಮತ್ತು ಗ್ರಾಮದ ರೈತರುಗಳು ಮತ್ತು ಊರಿನ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.\
ವರದಿ : ಗಾರಲದಿನ್ನಿ ವೀರನಗೌಡ




