Ad imageAd image

ಸದಲಗಾ ಪುರಸಭೆಯ ಅಧ್ಯಕ್ಷರಾಗಿ ಬಸವರಾಜ ಗುಂಡಕಲ್ಲೆ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಅವಿರೋಧ ಆಯ್ಕೆ

Bharath Vaibhav
ಸದಲಗಾ ಪುರಸಭೆಯ ಅಧ್ಯಕ್ಷರಾಗಿ ಬಸವರಾಜ ಗುಂಡಕಲ್ಲೆ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ಚಿಕ್ಕೋಡಿ:  ತಾಲೂಕಿನ ಸದಲಗಾ ಪುರಸಭೆಯ ಮುಂದಿನ ಆರು ತಿಂಗಳ ಅವಧಿಗಾಗಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪುನರ್ ಆಯ್ಕೆಯಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ಸು ಆಗಿದ್ದಾರೆ.

ಕೊನೆಯ ಕ್ಷಣದಲ್ಲಿ ಜನತಾದಳದ ಇಬ್ಬರು ಅಭ್ಯರ್ಥಿಗಳು ಕಾಂಗ್ರೆಸ್ ಗುಂಪಿಗೆ ಬೆಂಬಲ ಸೂಚಿಸಿದ್ದರಿಂದ ಅಧ್ಯಕ್ಷರಾಗಿ ಬಸವರಾಜ ಗುಂಡಕಲ್ಲೇ ಹಾಗೂ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ನವಲೆ ಬಹುಮತದಿಂದ ಆಯ್ಕೆಯಾಗಿರುವುದಾಗಿ ಚುನಾವಣೆ ಅಧಿಕಾರಿ ಚಿದಂಬರ ಕುಲಕರ್ಣಿ  ಘೋಷಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿಯವರ ಮಾರ್ಗದರ್ಶನದಲ್ಲಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಸಂಸದೆ ಪ್ರಿಯಾಂಕ ಜಾರಕಿಹೊಳಿಯವರ ಉಪಸ್ಥಿತಿಯಲ್ಲಿ ನಡೆದ ಸದಲಗಾ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಸಿದ್ಧಪಡಿಸಿದರು ಬಿಜೆಪಿ ಗುಂಪಿನಿಂದ ಅಧ್ಯಕ್ಷ ಸ್ಥಾನಕ್ಕೆ ಹೇಮಂತ್ ಸಿಂಗೆ ನಾಮಪತ್ರ ದಾಖಲಿಸಿದ್ದರು ಆದರೆ ನಾಮಪತ್ರ ಹಿಂಪಡೆಯುವ ಅವಧಿಗೆ ಮುಂಚೆ ತಮ್ಮ ಅರ್ಜಿಯನ್ನು ಹಿಂಪಡೆದಿದ್ದರಿಂದ ಕಾಂಗ್ರೆಸ್ ಗುಂಪಿನ ಬಸವರಾಜ ಗುಂಡಕಲ್ಲೆ ಆಯ್ಕೆಯಾಗಿರುವುದಾಗಿ ಚುನಾವಣೆ ಅಧಿಕಾರಿಗಳು ಘೋಷಿಸಿದರು. ಅದ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಘೋಷಣೆಯಾಗುತ್ತಿದ್ದಂತೆ ಪುರಸಭೆ ಹಾಗೂ ಬಸವರಾಜ ಗುಂಡಕಲ್ಲೆ ಅವರ ನಿವಾಸ ಎದುರು ಕಾಂಗ್ರೆಸ್ ಕಾರ್ಯಕರ್ತರಿಂದ ಗುಲಾಲ ಪಟಾಕ್ಷಿ ಹಾರಿಸಿ ವಿಜಯೋತ್ಸವ ಆಚರಿಸಿದರು. ಇದೆ ವೇಳೆಗೆ ಬಿಜೆಪಿ ಗುಂಪಿನ ಲಕ್ಷ್ಮೀಬಾಯಿ ನಿಡಗುಂದೆ ಹಾಗೂ ಮಾಲು ತಾಯಿ ಬೆಂಡವಾಡೆ ಇಬ್ಬರು ಸದಸ್ಯರು ಕಾಂಗ್ರೆಸ್ನ ಬಸವರಾಜ್ ಗುಂಡಕಲ್ಲೆ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿತು. ಇದೇ ಸಂದರ್ಭದಲ್ಲಿ ಶಾಸಕ ಗಣೇಶ್ ಹುಕ್ಕೇರಿ ಹಾಗೂ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ  ಮುಂಬರುವ ದಿನಗಳಲ್ಲಿ ಸದಲಗಾ ಪಟ್ಟಣದ ಸರ್ವಾಂಗಿನ ಅಭಿವೃದ್ಧಿಗಾಗಿ ತಾವು ಬದ್ಧರಾಗಿರುವುದಾಗಿ ತಿಳಿಸಿದರು ಸಮಾರಂಭದಲ್ಲಿ ತಹಸಿಲ್ದಾರ್ ಚಿದಂಬರ ಕುಲಕರ್ಣಿ ಉಪ ತಹಶೀಲ್ದಾರ್ ಪೀ.ಬೀ. ಶೀಲವಂತ, ಎಂ.ಎ.ನಾಗರಾಳೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆ ಸೇರಿದಂತೆ ಪುರಸಭೆ ಕಾಂಗ್ರೆಸ್ ಸದಸ್ಯರು ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಚುನಾವಣೆ ಸಂದರ್ಭದಲ್ಲಿ ಸಿಪಿಐ ವಿಶ್ವನಾಥ ಚೌಗುಲೆ ಸದಲಗಾ ಪೊಲಿಸ ಠಾನೆಯ ಪೀ ಎಸ್ ಐ ಶಿವಾನಂದ ಬಿರಾದಾರ್ ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!