Ad imageAd image

ಕಲ್ಯಾಣ ಕನ್ನಡ ಉತ್ಸವ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ

Bharath Vaibhav
ಕಲ್ಯಾಣ ಕನ್ನಡ ಉತ್ಸವ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ
WhatsApp Group Join Now
Telegram Group Join Now

ಇಳಕಲ್ : ನಗರದ ವಿಜಯ ಮಾಹಾಂತೇಶ ಮಠದ ದಾಸೋಹ ಭವನದಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಗೌರವ ಸನ್ಮಾನ ಹಾಗೂ ಸ್ಥಳೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕರುನಾಡು ಹಣತೆ ಕವಿ ಬಳಗ ರಾಜ್ಯ ಕೇಂದ್ರ ಘಟಕ ಚಿತ್ರದುರ್ಗ. ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕ್ ಘಟಕ ಇಳಕಲ್ ಇವರ ಸಂಯೋಗದಲ್ಲಿ ಕಲ್ಯಾಣ ಕನ್ನಡೋತ್ಸವ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವ ಸಮಾರಂಭ ಎರಡು ಕೃತಿಗಳ ಲೋಕಾರ್ಪಣೆಯ ಸಮಾರಂಭವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಪೂಜ್ಯರಾದ ಗುರುಮಹಾಂತ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಡಾ.ಚನ್ನಬಸವ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳವರು ನಂದವಾಡಗಿ. ಶ್ರೀ ಮ,ನಿ,ಪ್ರ, ಚನ್ನ ವೀರೇಶ್ವರ ಮಹಾಸ್ವಾಮೀಜಿಗಳವರು ವಿರಕ್ತ ಮಠ ಕೊಣ್ಣೂರು ವಹಿಸಿದ್ದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ ನಗರ ಕಲಾವಿದರ ತವರೂರು ಅದರಂತೆ ಸಾಹಿತಿಗಳ ಕವಿಗಳ ತವರೂರಾಗಿದೆ.ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಲ್ಲಿ
ಕನ್ನಡ ಸಾಹಿತ್ಯವನ್ನು ಪಸರಿಸುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಅಲ್ಲದೆ ಹೆಚ್ಎಸ್ ಗೌಡರ ಅವರ ಎರಡು ಕೃತಿಗಳ ಲೋಕಾರ್ಪಣೆ ಗೊಳಿಸಿದ್ದು, ಇವರ ಬರವಣಿಗೆ ಹೀಗೆ ಸಾಗಲಿ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು, ಸಾಧಕರು , ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಧಕರಿಗೆ ಸತ್ಕಾರ ಸಮಾರಂಭ ವಿವಿಧ ಪ್ರಶಸ್ತಿಗಳ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!