ನಿಡಗುಂದಿ :- ಆಲಮಟ್ಟಿ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜಯಪುರದ ಬಾಲಕ ಮತ್ತು ಬಾಲಕಿಯರ ತಂಡ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕ್ರೀಡಾಕೂಟದ ಸಂಘಟಕ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಮಾತನಾಡಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ ಹಮ್ಮಿಕೊಂಡಿದ್ದು ಐತಿಹಾಸಿಕ ಸಾಧ್ಯ ಸಾಧ್ಯತೆಗಳ ಘಟನೆಗಳನ್ನು ಸಾಧಿಸಿದ್ದು ತಾವುಗಳು ಎಂದು ಹೇಳಿದರು,ನಮ್ಮ ಜಿಲ್ಲೆಯ ನಮ್ಮ ತಾಲೂಕಿನ ನಮ್ಮೂರಿನ ಬಾಲಕ ಮತ್ತು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ನನಗೆ ತುಂಬಾನೇ ಖುಷಿಯಾಗುತ್ತಿದೆ.
ವಿಶೇಷವಾಗಿ ನಿಡಗುಂದಿ ತಾಲೂಕಿನ ಬಾಲಕ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕಾದರೆ ದೈಹಿಕ ಶಿಕ್ಷಕರ ಪರಿಶ್ರಮ ಶಿಕ್ಷಕರು ಹಾಗೂ ಗುರು ಹಿರಿಯರ ಯುವಕರ ಪ್ರೋತ್ಸಾಹದೊಂದಿಗೆ ಮಕ್ಕಳ ಪ್ರತಿಭೆ ಕಾಣಲಿಕ್ಕೆ ಸಾಧ್ಯವಾಗಿದೆ, ಹೀಗೆ ನಿಮ್ಮ ಜಯದ ಗುರಿ ಸಾಗಲಿ ಎಂದು ಹಾರೈಸುತ್ತೇನೆ ಹೇಳಿದರು.
ಬಹುಮಾನವನ್ನು ಪಡೆದುಕೊಂಡ ನಿಡಗುಂದಿಯ ಮಣಗೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಡಗುಂದಿ, ಆಲಮಟ್ಟಿ ಸಮೀಪದ ಬೇನಾಳ ಆರ್ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ/ಬಾಲಕಿಯರ ತಂಡ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಎ.ಎಸ್. ಲಾಳಶೇರಿ, ಎಸ್.ಎಂ. ಪಾಟೀಲ, ವಿಜಯಕುಮಾರ ದೇಸಾಯಿ, ಅಶೋಕ ಬೂದಿಹಾಳ, ಎಂ.ಆರ್. ಮಕಾನದಾರ, ಬಸವರಾಜ ಯರವಿನತೆಲಿಮಠ ಎಂ.ಎಸ್. ಮುಕಾರ್ತಿಹಾಳ, ಎಸ್.ಎಚ್. ಬಿರಾದಾರ, ಎಸ್.ಎನ್. ಮಿಣಜಗಿ, ಎಚ್.ಎಂ. ಬಲವಾಡ, ಎಸ್.ಎಂ. ಪಾಟೀಲ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಎಂ.ಬಿ. ಬಿರಾದಾರ, ಆರ್.ಬಿ. ಗೌಡರ. ವಿ.ಕೆ. ಮಸೂತಿ, ಆರ್.ಜಿ.ಬುಲಾತಿ ,ಅಧ್ಯಕ್ಷತೆ ವಹಿಸಿದ್ದರು.
ವರದಿ :ಅಲಿ ಮಕಾನದಾರ