Ad imageAd image

ನಮ್ಮನ್ನು  ಸಮಾಧಿ ಮಾಡಲು ವಿಜಯೇಂದ್ರ ಹೊರಟಿದ್ದಾರೆ : ಬಿಜೆಪಿಯಲ್ಲಿ ಮನೆಯೊಂದು ನೂರು ಬಾಗಿಲು ಪರಿಸ್ಥಿತಿ

Bharath Vaibhav
ನಮ್ಮನ್ನು  ಸಮಾಧಿ ಮಾಡಲು ವಿಜಯೇಂದ್ರ ಹೊರಟಿದ್ದಾರೆ : ಬಿಜೆಪಿಯಲ್ಲಿ ಮನೆಯೊಂದು ನೂರು ಬಾಗಿಲು ಪರಿಸ್ಥಿತಿ
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ : ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಶಾಸಕ ಯತ್ನಾಳ್ ಬೆನ್ನಲ್ಲೇ ಇದೀಗ ಸಂಸದ ಡಾ.ಕೆ.ಸುಧಾಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ನನ್ನ ಸಹನೆಯ ಕಾಲ ಮುಗಿಯಿತು. ಇನ್ನೇನಿದ್ದರೂ ಯುದ್ಧ ಎಂದು ಹೇಳುವ ಮೂಲಕ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರವಾಗಿ ನನ್ನನ್ನು ಸೌಜನ್ಯಕ್ಕೂ ಒಂದೇ ಒಂದು ಮಾತು ಕೇಳಿಲ್ಲ. ವಿಜಯೇಂದ್ರ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ.

ನಾವೆಲ್ಲ ಬಸವರಾಜ್ ಬೊಮ್ಮಾಯಿ ಅರೊಂದಿಗೆ ಒಟ್ಟಾಗಿ ಕೆಲಸ ಮಾಡಿದವರು ಎಂಬ ಕಾರಣಕ್ಕೆ ನಮ್ಮನ್ನು ದ್ವೇಷಿಸುತ್ತಿದ್ದಾರೆ. ವಿಜಯೇಂದ್ರಗೆ ಬರಿ ಅಸೂಯೆ, ಶ್ವೇಷದ ರಾಜಕಾರಣ ಮಾತ್ರ ಗೊತ್ತು ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ.

ನಿಮಗೆ ಎಸ್ ಬಾಸ್, ಜೀ ಹುಜೂರ್ ಎನ್ನುವವರು ಬೇಕು. ಮಿಸ್ಟರ್ ವಿಜಯೇಂದ್ರ ಅವರ ಧೋರಣೆ ನಮಗೆ ಬೇಸರ ತಂದಿದೆ.ವಿಜಯೇಂದ್ರಗೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಜಾಯಮಾನವಿಲ್ಲ.

ಅವರಿಗೆ ಬರಿ ದರ್ಪ, ಅಹಂಕಾರ. ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂಪಾಯಿ ಇರಬಹುದು, ರೀಯಲ್ ಎಷ್ಟೇಟ್ ಉದ್ಯಮವೂ ಇರಬಹುದು.ಆದರೆ ಅದ್ಯಾವುದೂ ರಾಜಕಾರಣವಲ್ಲ. ರಾಜ್ಯಾಧ್ಯಕ್ಷರಿಗೆ 2-3 ಬಾರಿ ಫೋನ್ ಮಾಡಿದರೂ ರೆಸ್ಪಾನ್ಸ್ ಮಾಡಲ್ಲ. ಅಪಾಯಿಂಟ್‌ಮೆಂಟ್  ಫಿಕ್ಸ್ ಮಾಡಿ ಬಳಿಕ ಕ್ಯಾನ್ಸಲ್ ಮಾಡ್ತಾರೆ.

ನಡ್ಡಾ ಅವರಿಗೆ ಮೆಸೇಜ್ ಹಾಕಿದರೆ ಅಪಾಯಿಂಟ್ ಮೆಂಟ್ ಕೊಡ್ತಾರೆ. ನಮ್ಮನ್ನು ತುಳಿಯಲು, ಸಮಾಧಿ ಮಾಡಲು ವಿಜಯೇಂದ್ರ ಹೊರಟಿದ್ದಾರೆ. ವಿಜಯೇಂದ್ರ ಅವರ ಹಿಂಬಾಲಕರು ನನ್ನನ್ನು ಸೋಲಿಸಲು ಹೊರಟಿದ್ದಾರೆ ಎಂದು ಗುಡುಗಿದರು.

ನಾನು ದೆಹಲಿಯಲ್ಲಿ ಶೀಘ್ರವೇ ವರಿಷ್ಠರನ್ನು ಭೇಟಿಯಾಗುತ್ತೇನೆ. ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪಕ್ಷದಲ್ಲಿನ ಬೆಳವಣಿಗೆ, ಹಿರಿಯ ನಾಯಕರ ಕಡೆಗಣನೆ ಎಲ್ಲವನ್ನೂ ಸಂಪೂರ್ಣವಾಗಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!