
ಬೈಲಹೊಂಗಲ: ಹೌದು ಬೆಳಗಾವಿ ಜಿಲ್ಲೆಯಲ್ಲಿ Dcc ಬ್ಯಾಂಕ್ ಚುನಾವಣೆ ಕಾವು ತುಂಬಾ ರಂಗೇರಿದ್ದು, ಇಂದು ಬೈಲಹೊಂಗಲ ತಾಲ್ಲೂಕಿನ ಚಿಕ್ಕ ಬಾಗೇವಾಡಿ ಸಮೀಪದ ರಾಜ್ಯ ಹೆದ್ದಾರಿ ರಸ್ತೆಯಲ್ಲಿರುವ ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕುಗಳ Dcc ಬ್ಯಾಂಕ್ ಚುನಾವಣೆಯ ಅಭ್ಯರ್ಥಿಗಳಾದ ಮಹಾಂತೇಶ್ ದೊಡ್ಡಗೌಡರು ಹಾಗೂ ವಿಕ್ರಂ ಇನಾಂದಾರ್ ಪ್ರಚಾರಾರ್ಥ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೌಹಾರ್ದಯುತ ಸಭೆಯಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕಾರ ಮಾತನಾಡಿದ ಪ್ರಭಾವಿ ರಾಜಕಾರಣಿ ಹಾಗೂ ಅರಭಾವಿ ಕ್ಷೇತ್ರದ ಬಾಲಚಂದ್ರ ಜಾರಕಿಹೊಳಿಯವರು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ಕಿತ್ತೂರು, ಬೈಲಹೊಂಗಲ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಂಡು ಬರೋದು ಶತಸಿದ್ದ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಾಂತೇಶ್ ದೊಡ್ಡಗೌಡರು ಮಾತನಾಡಿ ಎಲ್ಲಾ ಪಿ.ಕೆ.ಪಿ.ಎಸ್ ಸಬಲೀಕರಣಕ್ಕಾಗಿ ಇನ್ನೂ ಹೆಚ್ಚಿನದಾಗಿ ಕೆಲಸ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜು ಅಂಕಲಗಿ, ಅಪ್ಪ ಸಾಹೇಬ್ ಕುರಣಿ, ಚಿದಾನಂದ ಸವದಿ, ಶಂಕರ ಮಾಡಲಗಿ, ಅರವಿಂದ ಪಾಟೀಲ್, ಚನ್ನಬಸಪ್ಪ ಮೊಕಾಶಿ ಸೇರಿದಂತೆ ಎಲ್ಲಾ ಮುಖಂಡರು, ಎಲ್ಲಾ ಕಾರ್ಯಕರ್ತರು ಬಾಗವಹಿಸಿದ್ದರು.
ವರದಿ: ಬಸವರಾಜು



		
		
		
